ಕೊರೋನಾಗೆ ಪೆರಂಪಳ್ಳಿ ವ್ಯಕ್ತಿಯ ಸಾವು, ಹೃದಯಾಘಾತ ಬಿಂಬಿಸಲು ಒತ್ತಡ?

ಉಡುಪಿ: ಕೊರೋನಾ ಸೋಂಕಿತರೊರ್ವರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ 43 ವರ್ಷದ ವ್ಯಕ್ತಿಯೊರ್ವರು ಮೃತಪಟ್ಟಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆ ಪೆರಂಪಳ್ಳಿ ವ್ಯಕ್ತಿ ಮಧುಮೇಹದ ಚಿಕಿತ್ಸೆಗೆ ದಾಖಲಾಗಿದ್ದರು.

ನಿನ್ನೆ ರಾತ್ರಿ ತೀವ್ರ ಎದೆ ನೋವು ಮತ್ತು ಉಸಿರಾಟದ ಸಮಸ್ಯೆಯಿಂದ ಟಿಎಮ್‌ಎಪೈ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರ ಚಿಕಿತ್ಸೆ ಫಲಿಸದೆ ಮೃತ ಪಟ್ಟಿದ್ದಾರೆ.

ಮೃತ ವ್ಯಕ್ತಿ ನಗರಸಭೆಯ ಮಾಜಿ ಸದಸ್ಯರ ಸಹೋದರ ಎಂದು ತಿಳಿದು ಬಂದಿದ್ದು, ರೋಗಿ ಹೃದಯಾಘಾತದಿಂದ ಮೃತ ಪಟ್ಟಿದ್ದಾಗಿ ಬಿಂಬಿಸಲು ಉಡುಪಿಯ ಜನಪ್ರತಿನಿಧಿಯೊಬ್ಬರು ಪ್ರಯತ್ನ ಪಡುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ.

Leave a Reply

Your email address will not be published. Required fields are marked *

error: Content is protected !!