ಉಡುಪಿ ಕೊರೋನಾ ಸೋಂಕು ಏರಿಕೆ: ಮನೆಯಲ್ಲೇ ನಾಗರ ಪಂಚಮಿ ಆಚರಿಸಿ
ಉಡುಪಿ: ತುಳುವರ ನಂಬಿಕೆಯ ಆರಾಧ್ಯ ನಾಗದೇವರಿಗೆ ತನು ಏರೆಯಲು ಈ ಬಾರಿ ಕೊರೋನಾ ಮಹಾಮಾರಿ ಅಡ್ಡಿಯಾಗಲಿದ್ದು, ಜನರಲ್ಲಿ ಮತ್ತಷ್ಟು ಆತಂಕಂಕ್ಕೆ ಕಾರಣವಾಗಿದೆ.
ತುಳುನಾಡಿನಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸುವ ಮೊದಲ ಹಬ್ಬಕ್ಕೆ ಕೊರೋನಾ ವ್ಯಾಪಕವಾಗಿ ಹರಡಿರುವ ಕಾರಣದಿಂದ ಜುಲೈ ೨೫ ರಂದು ನಾಗರ ಪಂಚಮಿಗೆ ಜಿಲ್ಲೆಯ ಜನರು ತನು ಹಾಕಲು ನಾಗ ಬನಗಳಿಗೆ ಸಾಮೂಹಿಕವಾಗಿ ತೆರಳುವಂತಿಲ್ಲವೆಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿದೆ.
ಶ್ರಾವಣ ಮಾಸದ ಪಂಚಮಿಯಂದು ನಾಗ ಬನಗಳಿಗೆ ಭಕ್ತರು ಹೋಗಿ ನಾಗನ ಕಲ್ಲುಗಳಿಗೆ ಹಾಲೆರೆಯುವ ಪದ್ದತಿ ಆನಾದಿ ಕಾಲದಿಂದಲೂ ಇದೆ. ಅಂದು ಬನಗಳಲ್ಲಿ ನೂರಾರು ಜನ ಸೇರುವುದರಿಂದ ಕೊರೋನಾ ಸೋಂಕು ಮತ್ತಷ್ಟು ಹೆಚ್ಚುವ ಭೀತಿಯಿದೆ. ಹೀಗಾಗಿ ಅವಕಾಶ ನೀಡದಿರಲು ಜಿಲ್ಲಾಡಳಿತ ನಿರ್ಧಾರ ಕೈಗೊಂಡಿದೆ. ಶ್ರಾವಣ ಮಾಸದ ಯಾವುದೇ ಹಬ್ಬ, ಆಚರಣೆಗಳನ್ನು ನಡೆಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.