ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸಮಸ್ಯೆಗಳ ಬಗ್ಗೆ ಸಚಿವರಿಗೆ ಮನವಿ
ಉಡುಪಿ ಜುಲೈ 15: ಉಡುಪಿ ಜಿಲ್ಲೆ ಹಾಗೂ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ತುಂಡು ಭೂಮಿಗಳು ಅಧಿಕ ಇದ್ದು, ಉಡುಪಿ ಮಲ್ಪೆ ಮಾಸ್ಟರ್ ಪ್ಲಾನ್ ಪರಿಷ್ಕೃತ-1ರ ಅನುಮೋದನೆ ಆಗುವುದಕ್ಕಿಂತ ಮೊದಲು ಭೂಪರಿವರ್ತನೆ ಆಗಿ , ವಿಂಗಡಣೆ ಮಾಡಿ , ಮಾರಾಟ ಮಾಡಿದ ಜಾಗಗಳಿಗೆ ಏಕ ವಿನ್ಯಾಸ ಎಂದು ಪರಿಗಣಿಸ ಬೇಕು.
ಉಡುಪಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ತುಂಡು ಭೂಮಿಗಳು ಹೆಚ್ಚು ಇರುವುದರಿಂದ, ಕುಟುಂಬದೊಳಗೆ ವಿಭಾಗ ಪತ್ರದ ಮೂಲಕ ವಿಂಗಡಿಸಿದ ಭೂಮಿಗಳಿಗೆ , ಉದ್ಯಾನವನ ಹಾಗೂ ಬಯಲುಜಾಗವನ್ನು ಕಾಯ್ದಿರಿಸುವುದನ್ನು ವಿನಾಯತಿ ನೀಡಲು ಹಾಗೂ 1 ಎಕ್ರೆ ಒಳಗಿನ ಜಮೀನುಗಳನ್ನು ವಿಂಗಡಿಸುವಾಗ 15% ಉದ್ಯಾನವನ ಹಾಗೂ ಬಯಲು ಜಾಗವನ್ನು ಬಿಡುವುದರಿಂದ, ಸದರಿ ಉದ್ಯಾನವನ ಜಾಗವನ್ನು ಸೂಕ್ತವಾಗಿ ನಿರ್ವಹಣೆ ಮಾಡಲು ಕಷ್ಟ ಸಾಧ್ಯವಾಗಿದೆ.
ಪ್ರಾಧಿಕಾರದ ವ್ಯಾಪ್ತಿಯಲ್ಲಿ ತುಂಡು ಭೂಮಿಗಳು ಹೆಚ್ಚು ಇರುವುದರಿಂದ, ಕೃಷಿ ವಲಯದಲ್ಲಿ0.10ಎಕ್ರೆ ವರೆಗೆ ವಾಸ್ತವ್ಯ ಉದ್ದೇಶಕ್ಕಾಗಿ ಮನೆ ನಿರ್ಮಿಸಲು ಸಾರ್ವಜನಿಕರಿಗೆ ಉಪಯೋಗವಾಗುವ ಹಾಗೆ ಭೂ ಪರಿವರ್ತನೆಗೆ ನಿರಾಕ್ಷೇಪಣ ಪತ್ರ ನೀಡುವ ಸಂಬoಧ ಹಲವಾರು ವರ್ಷಗಳಿಂದ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸಾರ್ವಜನಿಕರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಸರಿಪಡಿಸಲು ಸಬ್ ಡಿವಿ ಜನ್‌ರೆಗ್ಯೂಲೇಶನ್‌ಗೆ ತಿದ್ದುಪಡಿ ತರಲು ಪ್ರಾಧಿಕಾರದ ಅಧ್ಯಕ್ಷ ಕೆ.ರಾಘವೇಂದ್ರ ಕಿಣಿ, ಪ್ರಾಧಿಕಾರದ ಸದಸ್ಯ ದಿನಕರ ಪೂಜಾರಿ, ಕಿಶೋರ್‌ಕುಮಾರ್, ಕಪ್ಪೆಟ್ಟು ಪ್ರವೀಣ್ ಶೆಟ್ಟಿ, ಸುಮಾ ನಾಯ್ಕ್ ಇವರು ಉಡುಪಿಯಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರಿಗೆ ಮನವಿ ಸಲ್ಲಿಸಿದರು.
ಈ ಎಲ್ಲಾ ಸಮಸ್ಯೆಗಳ ಬಗ್ಗೆ ಸಚಿವರು ಬೆಂಗಳೂರಿನಲ್ಲಿ ನಗರಾಭಿವೃದ್ಧಿ ಇಲಾಖೆಯಲ್ಲಿ ಸಭೆಯನ್ನು ನಡೆಸಿ ಸಮಸ್ಯೆಗಳ ಬಗ್ಗೆ ಸೂಕ್ತ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ ಎಂದು ಉಡುಪಿ ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಕೆ.ರಾಘವೇಂದ್ರ ಕಿಣಿ ತಿಳಿಸಿದ್ದಾರೆ.