ಗುಜರಾತ್: ಗುಟ್ಕಾ ವಿತರಕನಲ್ಲಿ 100 ಕೋ.ರೂ. ಅಘೋಷಿತ ಆದಾಯ ಪತ್ತೆ!

ಅಹಮದಾಬಾದ್ ನ.24: ಗುಜರಾತ್ ಮೂಲದ ಗುಟ್ಕಾ ವಿತರಕರೊಬ್ಬರಿಗೆ ಸೇರಿದ ಸ್ಥಳಗಳಲ್ಲಿ 100 ಕೋ.ರೂ. ಅಘೋಷಿತ ಆದಾಯ ಪತ್ತೆಯಾಗಿದೆ ಎಂದು ಮಾಧ್ಯಮ ವೊಂದು ವರದಿ ಮಾಡಿದೆ.

ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ ವೇಳೆ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ಸರಕಾರ ಹೊರಡಿಸಿದ ಹೇಳಿಕೆಯ ಪ್ರಕಾರ  ಆದಾಯ ತೆರಿಗೆ ಅಧಿಕಾರಿಗಳು ನವೆಂಬರ್ 16 ರಂದು ಅಹಮದಾಬಾದ್‌ನಲ್ಲಿ ಗುಟ್ಕಾ ವಿತರಕರ ಕನಿಷ್ಠ 15 ಸ್ಥಳಗಳಲ್ಲಿ ದಾಳಿ ಮಾಡಿ ಶೋಧ ನಡೆಸಿದ್ದಾರೆ. ಈ ವೇಳೆ ಸುಮಾರು  7.5 ಕೋಟಿ ರೂ. ಮೌಲ್ಯದ ಲೆಕ್ಕಕ್ಕೆ ಸಿಗದ ನಗದು ಹಾಗೂ  4 ಕೋಟಿ ರೂ. ಮೌಲ್ಯದ ಚಿನ್ನಾಭರಣ ಪತ್ತೆಯಾಗಿದ್ದು ಅಧಿಕಾರಿಗಳು ಅವುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಹೇಳಿಕೆಯಲ್ಲಿ ಗ್ರೂಪ್ ಹೆಸರನ್ನು ಬಹಿರಂಗಪಡಿಸಲಾಗಿಲ್ಲ. ಹಾಗೂ 30 ಕೋಟಿ ರೂ. ಮೌಲ್ಯದ ಅಘೋಷಿತ ಆದಾಯವನ್ನು ಹೊಂದಿರುವುದನ್ನು ಸಮೂಹ ಒಪ್ಪಿಕೊಂಡಿರುವುದಾಗಿ ಸರಕಾರದ ಹೇಳಿಕೆ ತಿಳಿಸಿದೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!