ಉಡುಪಿ: ನಗರಸಭೆಯ ಇಬ್ಬರು ಸದಸ್ಯೆಯರಿಗೆ ಕೋವಿಡ್-19 ಪಾಸಿಟಿವ್

ಉಡುಪಿ: ನಗರಸಭೆಯ ಇಬ್ಬರು ಸದಸ್ಯೆಯರಿಗೆ ಇಂದು ಕೋವಿಡ್-19 ಸೋಂಕು ದೃಢವಾಗಿದೆ.

ಓರ್ವ ಸದಸ್ಯೆ ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ಇನ್ನೋರ್ವ ಸದಸ್ಯೆಗೂ ಕೋವಿಡ್-19 ಸೋಂಕು ದೃಢವಾದ ಕಾರಣ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಇಬ್ಬರೂ ಕೂಡ ನಿರಂತರ ಜನರ ಸಮಸ್ಯೆಗೆ ಸ್ಪಂದಿಸುತ್ತಿದ್ದರು.

ಇವರಿಬ್ಬರಿಗೂ ಯಾರ ಸಂಪರ್ಕದಿಂದ ಸೋಂಕು ತಗಲಿದೆಂದು ತಿಳಿದು ಬಂದಿಲ್ಲ. ಮಂಗಳವಾರ ನಗರಸಭೆಯ ಆರೋಗ್ಯಾಧಿಕಾರಿಗೆ ಕೋವಿಡ್ ಸೋಂಕು ದೃಢವಾಗಿತ್ತು. ಈ ಹಿನ್ನಲೆಯಲ್ಲಿ ಕಚೇರಿಯನ್ನು ಸೀಲ್ ಡೌನ್ ಮಾಡಿ ಸ್ಯಾನಿಟೈಸ್ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!