ಉಡುಪಿ: ಜುಲೈ 16 ರಿಂದ ಖಾಸಗಿ ಬಸ್ ಸಂಚಾರ ಸ್ಥಗಿತ?

ಉಡುಪಿ: (ಉಡುಪಿ ಟೈಮ್ಸ್ ವರದಿ)ಜಿಲ್ಲೆಯಲ್ಲಿ ಜುಲೈ 15 ರಿಂದ ಜಿಲ್ಲೆಯ ಎಲ್ಲಾ ಗಡಿಭಾಗಗಳನ್ನು ಬಂದ್ ಗೊಳಿಸುವುದರ ಜೊತೆ, ಬಸ್ ಸಂಚಾರವೂ ಸ್ಥಗಿತಗೊಳ್ಳುವುದಾಗಿ ತಿಳಿದು ಬಂದಿದೆ.


ಮಂಗಳವಾರ ಜಿಲ್ಲೆಯಲ್ಲಿ ಲಾಕ್ ಡೌನ್‌ಗೊಳಿಸುವ ಬಗ್ಗೆ ಕರೆದ ಜನಪ್ರತಿನಿಧಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆಂದು ತಿಳಿದು ಬಂದಿದೆ.

ಈಗಾಗಲೇ ಜಿಲ್ಲೆಯಲ್ಲಿ ಖಾಸಗಿ ಬಸ್ ಸಂಚಾರ ಪ್ರಾರಂಭಿಸಿದರೂ ಸಾಕಷ್ಟು ಪ್ರಯಾಣಿಕರಿಲ್ಲದೆ ಬಸ್ ಸಂಚರಿಸುತ್ತಿದೆ. ಈ ನಡುವೇ ಕಳೆದ ಶನಿವಾರ ಉಡುಪಿ ಸಿಟಿ ಬಸ್ ಮಾಲಕರು ಯಾವುದೇ ಸೂಚನೆ ನೀಡದೆ 8 ಕ್ಕೂ ಹೆಚ್ಚೂ ಬಸ್ ಸ್ಥಗಿತಗೊಳಸಿದ್ದರ ಪರಿಣಾಮ, ಪ್ರಯಾಣಿಕರು ನಿಲ್ದಾಣದಲ್ಲೇ ಗಂಟೆಗಟ್ಟಲೇ ಕಾಯುವಂತಾಗಿತ್ತು.

ಇದರಿಂದ ಬಸ್‌ನಲ್ಲಿ ಯಾವುದೇ ಸಾಮಾಜಿಕ ಅಂತರವಿಲ್ಲದೆ ಪ್ರಯಾಣಿಕರು ಸಂಚರಿಸಿದ್ದಾರೆ. ಬಸ್ ಮಾಲಕರ ಈ ನಿರ್ಧಾರದಿಂದ ಸಾರ್ವಜನಿಕರು ಅಸಮಾಧನಗೊಂಡಿದ್ದರು. ಜಿಲ್ಲೆಯಲ್ಲಿ ಸ್ಥಗಿತಗೊಳಿಸಿದ ನರ್ಮ್ ಬಸ್ ಮತ್ತೆ ಸಂಚಾರ ಪ್ರಾಂಭಿಸಬೇಕೆಂಬ ಕೂಗು ಕೇಳಿ ಬಂದಿತ್ತು.

Leave a Reply

Your email address will not be published. Required fields are marked *

error: Content is protected !!