ದ್ವಿತೀಯ ಪಿಯು ಫಲಿತಾಂಶ : ಉಡುಪಿ ಪ್ರಥಮ, ಬಾಲಕಿಯರ ಮೇಲುಗೈ

ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶವನ್ನು ಮಂಗಳವಾರ ಪ್ರಕಟಿಸಲಾಗಿದ್ದು, ಒಟ್ಟಾರೆ ಶೇಕಡ 69.20 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ ಶೇಕಡ 68.68 ರಷ್ಟಿತ್ತು.

ಉಡುಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮ.

ಈ ಬಾರಿ ಬಾಲಕಿಯರು ಶೇ 68.73, ಬಾಲಕರು ಶೇ 54.77 ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ ಒಟ್ಟಾರೆ ಶೇ 61.73 ಫಲಿತಾಂಶ ಇತ್ತು.

ಉಡುಪಿ ಈ ಬಾರಿಯೂ ಪ್ರಥಮ ಪಡೆದಿದೆ. ದಕ್ಷಿಣ ಕನ್ನಡ ದ್ವಿತೀಯ, ಕೊಡಗು ಮೂರನೇ ಸ್ಥಾನದಲ್ಲಿವೆ. ಇತ್ತ ಚಿತ್ರದುರ್ಗ, ರಾಯಚೂರು ಮತ್ತು ವಿಜಯಪುರ ಕೊನೆಯ ಮೂರು ಸ್ಥಾನಗಳಲ್ಲಿವೆ.

ಕಾರ್ಕಳದ ಶಿರ್ಲಾಲು ವಿದ್ಯಾರ್ಥಿ ನೂರಕ್ಕೆ ನೂರು ಫಲಿತಾಂಶ .

ಈ ವರ್ಷ ಒಟ್ಟು 5 ಲಕ್ಷದ 56 ಸಾವಿರದ 267 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅವರಲ್ಲಿ 3 ಲಕ್ಷದ 84 ಸಾವಿರದ 947 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಈ ವರ್ಷ ಶೇಕಡಾ 47.56 ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ತೇರ್ಗಡೆ ಹೊಂದಿದ್ದು, ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಲ್ಲಿ ಶೇಕಡಾ 72.45ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಅನುತ್ತೀರ್ಣರಾದವರಿಗೆ ಪೂರಕ ಪರೀಕ್ಷೆ:ಫಲಿತಾಂಶದಲ್ಲಿ ಅನುತ್ತೀರ್ಣರಾದವರಿಗೆ ಆಗಸ್ಟ್ ಕೊನೆಯ ವಾರ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಪೂರಕ ಪರೀಕ್ಷೆ ನಡೆಸಲಾಗುವುದು. ಶುಲ್ಕ ಪಾವತಿಗೆ ಜುಲೈ 31 ಕೊನೆಯ ದಿನ ಎಂದರು. ಮರು ಮೌಲ್ಯಮಾಪನಕ್ಕೆ ಸಹ ಅವಕಾಶವಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.

ಕೊರೋನಾ ವೈರಸ್ ಕಾರಣದಿಂದ ಈ ವರ್ಷ ಕಾಲೇಜುಗಳಲ್ಲಿ ಫಲಿತಾಂಶ ಪ್ರಕಟಿಸುವುದಿಲ್ಲ ಎಂದು ತಿಳಿಸಿದರು.

3 thoughts on “ದ್ವಿತೀಯ ಪಿಯು ಫಲಿತಾಂಶ : ಉಡುಪಿ ಪ್ರಥಮ, ಬಾಲಕಿಯರ ಮೇಲುಗೈ

  1. Good luck for all students and their families. God bless them all for their better future.

Leave a Reply

Your email address will not be published. Required fields are marked *

error: Content is protected !!