ಕಾಪು: ಸೆಲೂನ್ ಸಿಬಂದಿಗೆ ಪಾಸಿಟಿವ್, ಗ್ರಾಹಕರಲ್ಲಿ ಆತಂಕ!
ಕಾಪು: ಸೆಲೂನೊಂದರ ಆಂಧ್ರ ಮೂಲದ ಕಾರ್ಮಿಕರಿಗೆ ಸೋಮವಾರ ಸೋಂಕು ಪಾಸಿಟಿವ್ ದೃಢವಾಗಿದೆ. 3-4 ದಿನಗಳಿಂದ ಆ ಸೆಲೂನ್‌ಗೆ ತೆರಳಿರುವ ಗ್ರಾಹಕರ ಮಾಹಿತಿ ಕಲೆ ಹಾಕಲಾಗುತ್ತಿದೆ. ಗ್ರಾಹಕರು ತಾವಾಗಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವ ಮೂಲಕ ಸೋಂಕು ಹರಡದಂತೆ ನೋಡಿಕೊಳ್ಳಲು ಕಾಪು ವೈದ್ಯಾಧಿಕಾರಿ ಡಾ| ಸುಬ್ರಾಯ ಕಾಮತ್ ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಸೋಮವಾರ 260 ನೆಗೆಟಿವ್ ಪ್ರಕರಣ ವರದಿಯಾಗಿದೆ. ಡಾ| ಟಿಎಂಎ ಪೈ ಆಸ್ಪತ್ರೆಯಿಂದ 12, ಕುಂದಾಪುರ ತಾ| ಆಸ್ಪತ್ರೆಯಿಂದ 50, ಕಾರ್ಕಳ ತಾಲೂಕು ಆಸ್ಪತ್ರೆಯಿಂದ ಮೂವರು ಸೇರಿದಂತೆ ಒಟ್ಟು 65 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಒಟ್ಟು 1,661 ಪಾಸಿಟಿವ್ ಪ್ರಕರಣಗಳಲ್ಲಿ 1,280 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 378 ಮಂದಿ ಚಿಕಿತ್ಸೆಗೆ ನೀಡಲಾಗುತ್ತಿದೆ. 1,749 ಜನರ ವರದಿ ಬರಬೇಕಾಗಿದೆ. 1,401 ಮಂದಿ ಮನೆಗಳಲ್ಲಿ ಮತ್ತು 148 ಮಂದಿ ಐಸೊಲೇಶನ್ ವಾರ್ಡ್‌ಗಳಲ್ಲಿ ನಿಗಾದಲ್ಲಿದ್ದಾರೆ. 34 ಮಂದಿ ಐಸೊಲೇಶನ್ ವಾರ್ಡ್ ನಿಗಾಕ್ಕೆ ಸೇರಿದ್ದು 26 ಮಂದಿ ಬಿಡುಗಡೆಯಾಗಿದ್ದಾರೆ.