ಉಡುಪಿಯ ಉಸ್ತುವಾರಿ ಸಚಿವರು ಕಾಣೆಯಾಗಿದ್ದಾರೆ: ಕೆ ಆರ್ ಎಸ್
ಉಡುಪಿ: ರಾಜ್ಯ ಸರಕಾರ ಪ್ರತಿ ಜಿಲ್ಲೆಗೆ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಅವರ ಮುಖಾಂತರ ಸುಗಮವಾಗಿ ಆಡಳಿತ ಮಾಡುವುದು ಸಂಪ್ರದಾಯ ಆದರೆ ಕಳೆದ ಕೆಲವು ತಿಂಗಳಲ್ಲಿ ಒಂದೋ ಎರಡೋ ಬಾರಿ ಕಾಟಾಚಾರಕ್ಕೆ ಸಭೆ ಮಾಡಿದ್ದು ಹೊರತು ಪಡಿಸಿದರೆ ಉಡುಪಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಪಾತ್ರ ಶೂನ್ಯ ,ಸಾಂಕ್ರಾಮಿಕ ರೋಗದ ಕಾರಣ ಇವತ್ತು ಆಡಳಿತ ಯಂತ್ರ ಸ್ಥಗಿತವಾಗಿದೆ ,ಜಿಲ್ಲಾಡಳಿತದ ಹೆಚ್ಚಿನ ಗಮನ ಕೋವಿಡ್ ಗೆ ಸಂಬಂಧಿಸಿದ ವಿಚಾರಗಳಿಗೆ ಜವಾಬ್ದಾರಿ ವಹಿಸುವುದರಲ್ಲಿ ಇರುತ್ತದೆ ,ಅದರಲ್ಲೂ ಹತ್ತು ಹಲವು ಗೊಂದಲಗಳಿಂದ ಜನ ದಿನಕಳೆಯುತ್ತಿದ್ದಾರೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಜಿಲ್ಲಾ ಕಾರ್ಯದರ್ಶಿ ಅಮೀರ್ ಬೆಳಪು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲೇ ಠಿಕಾಣಿ ಹೂಡಿ ಸರಕಾರದ ಪರವಾಗಿ ಜನರಲ್ಲಿ ಧೈರ್ಯ ತುಂಬುತ್ತಾ, ಸರಕಾರದ ನಿರ್ದೇಶನಗಳನ್ನು ಕಾಲಕಾಲಕ್ಕೆ ಜನರಿಗೆ ಹೇಳುತ್ತಾ ,ಅಧಿಕಾರಿಗಳ ಕರ್ತವ್ಯ ನಿರ್ವಹಣೆ ಬಗ್ಗೆ ನಿಗಾ ವಹಿಸುತ್ತಾ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಬೇಕಾದ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿಯವರು ಉಡುಪಿಯಿಂದ ಸಂಪೂರ್ಣ ದೂರ ಇದ್ದದ್ದು ಖಂಡನೀಯ ಕೂಡಲೆ ಸಚಿವರು ಇಲ್ಲಿಗೆ ಬಂದು ತನ್ನ ಜವಾಬ್ದಾರಿ ನಿರ್ವಹಿಸಬೇಕು ಇಲ್ಲವಾದರೆ ಮುಖ್ಯಮಂತ್ರಿಗಳು ಬೇರೆ ಯಾರನ್ನಾದರೂ ಈ ಸ್ಥಾನ ಕ್ಕೆ ನೇಮಕ ಮಾಡಬೇಕೆಂದು ಸರಕಾರವನ್ನು ಕರಾಸ ಪಕ್ಷದ ಉಡುಪಿ ಜಿಲ್ಲಾ ಕಾರ್ಯದರ್ಶಿ ಅಮೀರ್ ಬೆಳಪು ಆಗ್ರಹಿಸಿದ್ದಾರೆ. |