ಪಡುಬಿದ್ರಿ: ಶನಿವಾರ ಕೊರೊನಾ ಪಾಸಿಟಿವ್, ಸೋಮವಾರ ನೆಗೆಟಿವ್ ವರದಿ!
ಪಡುಬಿದ್ರಿ : ಕಳೆದ ಶನಿವಾರ ಬಂದ ಕೊರೊನಾ ಪರೀಕ್ಷಾ ವರದಿ ಪಾಸಿಟಿವ್ ಸೋಮವಾರ ನೆಗೆಟಿವ್ ಬಂದಿದೆ. ಇದರಿಂದ ಪಡುಬಿದ್ರಿ ಬೆಂಗ್ರೆ ನಿವಾಸಿಗಳು ಗೊಂದಲದಲ್ಲಿದ್ದಾರೆ. ಇದೇನು ವೈದ್ಯಕೀಯ ಮಾಫಿಯಾವೊ ? ಈ ಬಗ್ಗೆ ಜಿಲ್ಲಾಡಳಿತ ಉತ್ತರಿಸುವಂತೆ ದಲಿತ ಮುಖಂಡ ಲೋಕೇಶ್ ಕಂಚಿನಡ್ಕ ಆಗ್ರಹಿಸಿದ್ದಾರೆ. ಪಡುಬಿದ್ರಿ ಬೆಂಗ್ರೆಯ ಎಂಟು ಮಂದಿ ಮುಂಬೈನಿಂದ ಆಗಮಿಸಿ ಹೋಂ ಕ್ವಾರಂಟೈನಲ್ಲಿದ್ದರು. ಏಕಾಏಕಿ ಕ್ವಾರಂಟೈನಲ್ಲಿದ್ದ ಆರು ಮಂದಿಗೆ ಪಾಸಿಟಿವ್ ಎಂದು ಮನೆಯನ್ನು ಸೀಲ್ ಡೌನ್ ಮಾಡಿ ಸಂಜೆ ಹೊತ್ತಿಗೆ ಅಂಬುಲೆನ್ಸ್ನಲ್ಲಿ ಹೆಜಮಾಡಿಯ ಪಾಸಿಟಿವ್ ವ್ಯಕ್ತಿ ಸಹಿತ ಈ ಆರು ಮಂದಿಯನ್ನು ಕಾರ್ಕಳ ಆಸ್ಪತ್ರೆಗೆ ಸಾಗಿಸಿ ಕೊರೊನಾ ವಾರ್ಡಿಗೆ ಸೇರಿಸಲಾಗಿತ್ತು. ಎರಡು ರಾತ್ರಿ ಕಳೆದoತೆ ಈ ಕೊರೊನಾ ರೋಗಿಗಳಿಗೆ ಆಶ್ಚರ್ಯ ಕಾದಿತ್ತು, ಶನಿವಾರ ಪಾಸಿಟಿವ್ ಬಂದ ಆರು ಮಂದಿ ವರದಿಯು ನಂತರ ನೆಗೆಟಿವ್ ಎಂದು ಬಂತು. ಒಂದು ಕಡೆಯಿಂದ ಪರೀಕ್ಷಾ ವರದಿ ನೀಡುತ್ತಾರೆ. ಮತ್ತೊಂದು ಕಡೆ ಅವರಿಗಿಷ್ಟ ಬಂದಂತೆ ನಮ್ಮ ಬದುಕಿನ ಜೊತೆ ಚೆಲ್ಲಾಟವಾಡುವoತೆ ಮನೆಯನ್ನು ಸೀಲ್ ಡೌನ್ ಮಾಡಿ, ಗ್ರಾಮದ ಜನರು ನಮ್ಮನ್ನು ಅಸ್ಪೃಶ್ಯರಂತೆ ಕಾಣಲು ಕಾರಣವಾದ, ಇದೀಗ ಎರಡು ದಿನದಲ್ಲಿ ಯಾವುದೇ ಚಿಕಿತ್ಸೆ ನೀಡದೆ ರೋಗಿಗಳನ್ನು ಬಿಟ್ಟು ಹೋಗಿದ್ದಾರೆ. ಈ ಪಾಸಿಟಿವ್, ನೆಗೆಟಿವ್ ನಡುವೆ ಏನು ನಡೆಯುತ್ತಿದೆ ಗೊತ್ತಿಲ್ಲ, ಆದರೆ ಯಾವುದೇ ತಪ್ಪು ಮಾಡದೆ ನಮ್ಮಂಥ ಅದೆಷ್ಟೋ ಕುಟುಂಬಗಳು ಗ್ರಾಮದ ಜನರ ಮುಂದೆ ಅಸ್ಪೃಶ್ಯರಂತೆ ಬದುಕು ಸಾಗಿಸುವಂತೆ ಮಾಡುತ್ತಿರುವುದು ಮಾತ್ರ ಸತ್ಯ” ಎನ್ನುತ್ತಾರೆ ಬೇಂದ್ರೆ ಕುಟುಂಬ. |