ಕುಡಿದ ಮತ್ತಿನಲ್ಲಿ ಹೊಟೇಲ್ ಸಿಬ್ಬಂದಿ ಮೇಲೆ ಹಲ್ಲೆ- ಜುವೆಲ್ಲರಿ ಮಾಲೀಕನ ಪುತ್ರ ಸೇರಿ ಇಬ್ಬರ ಬಂಧನ

ಬೆಂಗಳೂರು ನ.7(ಉಡುಪಿ ಟೈಮ್ಸ್ ವರದಿ): ಕುಡಿದ ಮತ್ತಿನಲ್ಲಿ ಹೊಟೇಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಭೀಮಾಜುವೆಲ್ಲರಿ ಮಾಲೀಕನ ಪುತ್ರ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. 

ಭೀಮಾ ಜುವೆಲ್ಲರಿ ಮಾಲೀಕ ವಿಷ್ಣು ಭಟ್ ಮತ್ತು ಶ್ರೀಕಿ ಬಂಧಿತರು. ಬೆಂಗಳೂರಿನಲ್ಲಿ ಇಂದು‌ ಮಧ್ಯಾಹ್ನ ಮೂರು ಗಂಟೆಯ ಸುಮಾರಿನಲ್ಲಿ ರಾಯಲ್ ಆರ್ಚಿಡ್ ಹೋಟೆಲ್ ಗೆ ಬಂದಿದ್ದ ವಿಷ್ಣು ಭಟ್ ಮತ್ತು ಶ್ರೀಕಿ ಮದ್ಯದ ಅಮಲಿನಲ್ಲಿ ಹೋಟೆಲ್ ಒಳಗೆ ಹೋಗಲು ಹೋಟೆಲ್ ಸಿಬ್ಬಂದಿಯ ಜೊತೆ ಗಲಾಟೆ ಮಾಡಿದ್ದರು. ಕುಡಿದ ಅಮಲಿನಲ್ಲಿದ್ದ ವಿಷ್ಣುವನ್ನ‌ ಹೋಟೆಲ್ ಒಳಕ್ಕೆ ಬಿಡಲು ಸೆಕ್ಯುರಿಟಿ ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ವಿಷ್ಣು ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದು, ಈ ವೇಳೆ ಶ್ರೀಕಿ‌ ಕೂಡ ವಿಷ್ಣುವಿನ ಜೊತೆ ಸೇರಿ ಗಲಾಟೆ ಮಾಡಿದ್ದ.

ಗಲಾಟೆ ಅತಿರೇಕಕ್ಕೆ ಹೋಗ್ತಿದ್ದಂತೆ ಹೋಟೆಲ್ ಸಿಬ್ಬಂದಿ ಪೊಲೀಸ್ ಠಾಣೆಗೆ ಕರೆ ಮಾಡಿ ದೂರು ನೀಡಿದ್ದಾರೆ. ಸ್ಥಳಕ್ಕೆ ಜೆ .ಬಿ ‌ನಗರ ಪೊಲೀಸರು ಭೇಟಿ ನೀಡಿ ವಿಷ್ಣು ಹಾಗೂ ಶ್ರೀಕಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಹಲಸೂರು ಉಪವಿಭಾಗ ಎಸಿಪಿ ಡಿ ಕುಮಾರ್ ಅವರು ಶ್ರೀಕಿ ತಂಗಿದ್ದ ಹೋಟೆಲ್‌ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಲ್ಯಾಪ್ ಟಾಪ್, ಟ್ಯಾಬ್ ನ್ನು ವಶಕ್ಕೆ ಪಡೆದು ಇಬ್ಬರನ್ನು ವೈದ್ಯಕೀಯ ಪರೀಕ್ಷೆಗೊಳಪಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!