ಹೆಬ್ರಿ: ಕಾಂಗ್ರೆಸ್ಸಿನ ನಿಷ್ಕ್ರೀಯ ವ್ಯಕ್ತಿಗಳು ಬಿಜೆಪಿಗೆ: ಮಂಜುನಾಥ ಪೂಜಾರಿ

ಹೆಬ್ರಿ :  ರಾಜ್ಯದಲ್ಲಿ ಕೋವಿಡ್ ಮಹಾಮಾರಿಯಿಂದಾಗಿ  ಜನ ಸಾಯುತ್ತಿದ್ದರೆ, ಜನರ ಆರೋಗ್ಯದ ಕಾಳಜಿ ವಹಿಸಬೇಕಾದ ಸರ್ಕಾರ ಮತ್ತು ಬಿಜೆಪಿಯ ನಾಯಕರು ಹಗರಣಗಳ ದುರಾಡಳಿತ ನಡೆಸುತ್ತಿದ್ದಾರೆ. ಸಂಕಷ್ಠದಲ್ಲಿರುವ ಜನರ ಸಮಸ್ಯೆಯನ್ನು ಪರಿಹರಿಸುವ ಬದಲು ಕಾರ್ಕಳದ ಶಾಸಕರು ಅಧಿಕಾರ ಹಿಡಿಯಲು ಪಕ್ಷವನ್ನು ಹೇಗಾದರೂ ಮಾಡಿ ಉಳಿಸಲು ಬೇರೆ ಬೇರೆ ಪಕ್ಷದಿಂದ ಕೆಲವು ನಿಷ್ಕ್ರಿಯ ವ್ಯಕ್ತಿಗಳಿಗೆ ಆಮಿಷ ಮತ್ತು ಅಧಿಕಾರದ ಆಸೆ ತೋರಿಸಿ ಪಕ್ಷಕ್ಕೆ ಕರೆ ತರುತ್ತಿದ್ದಾರೆ. ಕಾಂಗ್ರೆಸ್‌ ನ ಪ್ರಾಥಮಿಕ ಸದಸ್ಯತ್ವ ಹೊಂದಿಲ್ಲದ ಯಾವುದೇ ಪದಾಧಿಕಾರಿಯೂ ಅಲ್ಲದ ವ್ಯಕ್ತಿಗಳನ್ನು ಕರೆ ತರಬೇಕಾದರೆ ಬಿ.ಜೆ.ಪಿ ಪಕ್ಷದ ಪರಿಸ್ಥಿತಿ ಯಾವ ರೀತಿ ಇದೆ? ಎಂದು ಜನ ಅರ್ಥ ಮಾಡಿಕೊಂಡಿದ್ದಾರೆ ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. 


ಬಿಜೆಪಿ ಸೇರಿದ ವ್ಯಕ್ತಿಗಳಿಗೂ  ಕಾಂಗ್ರೆಸ್ ಪಕ್ಷಕ್ಕೂ ಕೆಲವು ವರ್ಷಗಳಿಂದ ಯಾವುದೇ ಸಂಬಂಧವಿಲ್ಲ. ಕಾಂಗ್ರೆಸ್ ಪಕ್ಷ ಡಿ.ಕೆ.ಶಿಯವರ ನಾಯಕತ್ವದಲ್ಲಿ ರಾಜ್ಯದಲ್ಲಿ ಬಲಿಷ್ಠವಾಗುತ್ತಿದೆ. ಜನರ ಸಂಕಷ್ಠಕ್ಕೆ ಸ್ಪಂದಿಸುತ್ತಿದೆ. ಜನತೆ ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ. ಕಾರ್ಕಳ ಶಾಸಕರ ಕಾರ್ಯ ವೈಖರಿಯನ್ನು ಕ್ಷೇತ್ರದ ಜನ ಗಮನಿಸುತ್ತಿದ್ದಾರೆ. ನೀವು ನಿಮ್ಮ ಪಕ್ಷದ ನಿಜವಾದ ಕಾರ್ಯಕರ್ತರನ್ನು ಕಡೆಗಣಿಸಿ ಪಕ್ಷದಲ್ಲಿ ನಿಮ್ಮದೇ ಆದ ಗುಂಪು ಕಟ್ಟಿಕೊಂಡು ಜಿಲ್ಲೆಯಲ್ಲಿ ಮತ್ತು ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ನಿಮ್ಮನ್ನು ಅಧಿಕಾರಕ್ಕೆ ತಂದ ನಿಜವಾದ ಪಕ್ಷದ ಕಾರ್ಯಕರ್ತರ ಮೇಲೆ ನಂಬಿಕೆ ಇಲ್ಲದೆ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ ಕಾಂಗ್ರೆಸ್‌ ಸಹಿತ ಬೇರೆ ಪಕ್ಷದಲ್ಲಿ ಸವಕಲಾದವರನ್ನು ಕರೆತಂದು ಹೇಗಾದರೂ ಅಧಿಕಾರ ಉಳಿಸಿಕೊಳ್ಳುವ ಪ್ರಯತ್ನ ನಿಮ್ಮದಾಗಿದೆ. ಜನ ಮತ್ತು ನಿಮ್ಮ ಪಕ್ಷದವರೇ ನಿಮಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತಾರೆ. ಕಾಂಗ್ರೆಸ್ ಪಕ್ಷ ಬಲಿಷ್ಠವಾಗುತ್ತಿದೆ. ಕಾಂಗ್ರೆಸ್‍ನ ಪ್ರಾಮಾಣಿಕ ನಿಷ್ಠಾವಂತ ಕಾರ್ಯಕರ್ತರು ಯುವಕರು ಮತ್ತು ಮಹಿಳೆಯರು ಕಾಂಗ್ರೆಸ್ ಪಕ್ಷದ ಕಡೆಗೆ ಒಲವು ವ್ಯಕ್ತ ಪಡಿಸುತ್ತಿದ್ದು ಡಿ.ಕೆ.ಶಿಯವರ ನಾಯಕತ್ವದಲ್ಲಿ ಪಕ್ಷ ರಾಜ್ಯದಲ್ಲಿ ಅಧಿಕಾರವನ್ನು ಪಡೆಯುತ್ತದೆ. ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಸಾಧ್ಯವಿಲ್ಲ ಎನ್ನುವುದನ್ನು ಶಾಸಕರು ಮತ್ತು ಬಿ.ಜೆ.ಪಿ ಪಕ್ಷ ಅರಿತರೆ ಒಳ್ಳೆಯದು ಎಂದು ಮಂಜುನಾಥ ಪೂಜಾರಿ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!