ಉಡುಪಿ ಆಸರೆ ಚಾರಿಟೇಬಲ್ ಟ್ರಸ್ಟ್: ದಾಖಲೆ ಎಂಬಂತೆ 100 ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ

ಉಡುಪಿ, ನ.05 : ಶಾಸಕ ರಘುಪತಿ ಭಟ್ ನೇತೃತ್ವದ ಆಸರೆ ಚಾರಿಟೇಬಲ್ ಟ್ರಸ್ಟ್ ಉಡುಪಿ ಭಾಗದಲ್ಲಿ ವಿದ್ಯುತ್ ಸಂಪರ್ಕ ಇಲ್ಲದ ಆರ್ಥಿಕವಾಗಿ ಹಿಂದುಳಿದವರ ದೀನ ದಲಿತ ಬಡವರ ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕವನ್ನು ಕಲ್ಪಿಸುವ ಸೇವೆಯನ್ನು ನಡೆಸುತ್ತಿದ್ದು, ಈವರೆಗೆ ಸುಮಾರು 100 ಮನೆಗಳಿಗೆ ಟ್ರಸ್ಟ್ ವತಿಯಿಂದ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು.

100ನೇ ಮನೆಯ ವಿದ್ಯುತ್ ಸಂಪರ್ಕವನ್ನು ಇಂದ್ರಾಳಿ ಮಂಚಿ ಕುಮೇರಿಯ ಮನೆಯಲ್ಲಿ ದಾನಿಗಳಾದ ಎಂ.ಐ.ಟಿ ಮಣಿಪಾಲದ ಪ್ರೊ. ಡಾ. ನಾರಾಯಣ್ ಶೆಣೈ ಉದ್ಘಾಟಿಸಿದರು. ಕೊಡವೂರಿನಲ್ಲಿ ದಾನಿಗಳಾದ ದೇವಾನಂದ ಉಪಾಧ್ಯಾಯ ದಂಪತಿ, ಹಾಗೂ ಡಾ. ಶೃತಿ ಆಚಾರ್ಯ, ಪುತ್ತೂರಿನಲ್ಲಿ ತನ್ನ 50 ವರ್ಷದ ವೈವಾಹಿಕ ಸುವರ್ಣ ಮಹೋತ್ಸವ ಆಚರಿಸುತ್ತಿರುವ ಕುಂಜಿಬೆಟ್ಟು ಸುಜಾತಾ ಕಾಮತ್ ಮತ್ತು ಸುಧಾಕರ್ ಕಾಮತ್ ದಂಪತಿಗಳ ಪರವಾಗಿ ಸುಹಾನಿ ಕಾಮತ್ ಮತ್ತು ಕು.ಸುನಿಧಿ ಕಾಮತ್ ಉದ್ಘಾಟಿಸಿದರು. ಇಂದ್ರಾಳಿಯಲ್ಲಿ ದಾನಿಗಳಾದ ಕಾರ್ಪೊರೇಷನ್ ಬ್ಯಾಂಕ್ ಎಂಪ್ಲಾಯಿಸ್ ಅಸೋಸಿಯೇಷನ್ ಸದಸ್ಯ ರಮೇಶ್ ಕೊಳಂಬೆ ಸಹಕರಿಸಿದರು.

ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಇದರ ಸೇವಾ ಪ್ರಕಲ್ಪದ ಅಂಗವಾಗಿ ಆಸರೆ ಚಾರಿಟೇಬಲ್ ಟ್ರಸ್ಟ್ ಉಡುಪಿ ನಗರ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಇಲ್ಲದ ಆರ್ಥಿಕವಾಗಿ ಹಿಂದುಳಿದವರ ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕವನ್ನು ಕಲ್ಪಿಸುವ ಸೇವೆಯನ್ನು ನಡೆಸುತ್ತಿದೆ. ಉಡುಪಿ ಪುತ್ತೂರು, ಕೊಡವೂರು, ಇಂದ್ರಾಳಿ ಮಂಚಿ ಕುಮೇರಿ ಭಾಗದಲ್ಲಿ ದೀಪಾವಳಿ ಹಬ್ಬದ ಈ ಸಂದರ್ಭದಲ್ಲಿ 6 ಮನೆಗಳಿಗೆ ಟ್ರಸ್ಟ್ ವತಿಯಿಂದ ದಾನಿಗಳ ನೆರವಿನಿಂದ ಉಚಿತ ವಿದ್ಯುತ್ ಸಂಪರ್ಕ ನೀಡುವುದರ ಮುಖೇನ ಈವರೆಗೆ 100 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು.

ಈ ಸಂದರ್ಭದಲ್ಲಿ ಖ್ಯಾತ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ಉಡುಪಿ ನಗರ ಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಅಂಚನ್, ಸ್ಥಳೀಯ ನಗರಸಭಾ ಸದಸ್ಯರಾದ ಅಶೋಕ್ ನಾಯ್ಕ್, ವಿಜಯ್ ಕೊಡವೂರು, ಜಯಂತಿ ಪೂಜಾರಿ, ಮೆಸ್ಕಾಂ ಇಲಾಖೆ ಉಡುಪಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ಗಣರಾಜ್ ಭಟ್, ಮೆಸ್ಕಾಂ ಮಣಿಪಾಲದ ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಶಾಂತ್ ಪುತ್ರನ್, ಆಸರೆ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ ಪ. ವಸಂತ ಭಟ್, ಆಸರೆ ಚಾರಿಟೇಬಲ್ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಿಣಿ, ಕೋಶಾಧಿಕಾರಿ ಸತೀಶ್ ಕುಲಾಲ್, ಟ್ರಸ್ಟ್ ಸದಸ್ಯರಾದ ಸಂದೀಪ್, ಸುನಿಲ್, ವಿದ್ಯಾ ಶಾಮ್ ಸುಂದರ್ ಕಡಿಯಾಳಿ ದೇವಸ್ಥಾನದ ವ್ಯವಸ್ಥಾಪನ ಸದಸ್ಯ ಮಂಜುನಾಥ್ ಹೆಬ್ಬಾರ್ ಮತ್ತು ಗಣೇಶೋತ್ಸವ ಸಮಿತಿ ಸರ್ವ ಸದಸ್ಯರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಉಚಿತ ವಿದ್ಯುತ್ ಸಂಪರ್ಕಕ್ಕೆ ಸಹಕಾರ ನೀಡುತ್ತಿರುವ ಎಲೆಕ್ಟ್ರಿಷಿಯನ್‌ಗಳಾದ ನಾಗರಾಜ ಪ್ರಭು, ಹರಿ ಭಟ್ ಕಡಿಯಾಳಿ, ಆಶ್ವತ ದೇವಾಡಿಗ ಕಡಿಯಾಳಿ, ಹರೀಶ್ ದೇವಾಡಿಗ ಇಂದ್ರಾಳಿ ಇವರನ್ನು ಗೌರವಿಸಲಾಯಿತು.

Leave a Reply

Your email address will not be published. Required fields are marked *

error: Content is protected !!