ಉಡುಪಿ ಶ್ರೀಕೃಷ್ಣ ಮಠದಲ್ಲಿ ಗೋ ಪೂಜೆ ಸಂಪನ್ನ
ಉಡುಪಿ: ಶ್ರೀ ಕೃಷ್ಣ ಮಠದ ಕನಕನ ಕಿಂಡಿಯ ಎದುರುಗಡೆ ದೀಪಾವಳಿಯ ಬಲಿ ಪಾಡ್ಯದಂದು ಪರ್ಯಾಯ ಪರ್ಯಾಯ ಪೀಠಾಧೀಶರಾದ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು, ಪೇಜಾವರ ಮಠಾಧೀಶರಾದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು, ಪಲಿಮಾರು ಕಿರಿಯ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಗೋಗ್ರಾಸ ನೀಡಿ ಮಠದ ಪುರೋಹಿತರಾದ ಮುದರಂಗಡಿ ಲಕ್ಷ್ಮೀಶ ಆಚಾರ್ಯರು ಗೋ ಪೂಜೆಯನ್ನು ನಡೆಸಿದರು.
ಬಳಿಕ ರಥ ಬೀದಿಯಲ್ಲಿ ಬಿರುದು ಬಾವಲಿ ವಾದ್ಯ ಮೇಳಗಳೊಂದಿಗೆ ಗೋವುಗಳ ಮೆರವಣಿಗೆ ನಡೆಯಿತು.