ಕ್ರೈಮ್ ಧಾರಾವಾಹಿ ನೋಡಿ ಒಂಟಿ ವೃದ್ದೆಯ ಹತ್ಯೆ ಮಾಡಿದ ಅಪ್ರಾಪ್ತ ಬಾಲಕರು!

ಪುಣೆ ನ.5: ಅಪರಾಧ (ಕ್ರೈಮ್) ಧಾರಾವಾಹಿಗಳು ಹಾಗೂ ಸಿನೆಮಾಗಳನ್ನು ಮನರಂಜನೆಯ ಜೊತೆಗೆ ಅಪರಾಧ ಕೃತ್ಯಗಳ ಬಗೆಗೆ ಜಾಗೃತಿ ಮೂಡಿಸುವ ಸಲುವಾಗಿ ತೆರೆ ಮೇಲೆ ತರಲಾಗುತ್ತದೆ. ಆದರೆ ಅನೇಕ ಸಂದರ್ಭಗಳಲ್ಲಿ ಇಂತಹ ಸಿನೆಮಾ, ಧಾರಾವಾಹಿಗಳು ಯುವ ಮನಸ್ಸಿನ ಮೇಲೆ ಋಣಾತ್ಮಕ ಪರಿಣಾಮ ಬೀರುವುದೂ ಇದೆ.

ಇದಕ್ಕೊಂದು ಉದಾಹರಣೆ ಪುಣೆಯಲ್ಲಿ ನಡೆದ ಒಂದು ಘಟನೆ. 70 ವರ್ಷದ ವೃದ್ದೆಯ ಹತ್ಯೆ ಹಾಗೂ ದರೋಡೆ ಪ್ರಕರಣದ ಬೆನ್ನತ್ತಿದ ಪೊಲೀಸರಿಗೆ ಒಂದು ಆಶ್ಚರ್ಯ ಕಾದಿತ್ತು. ಇದಕ್ಕೆ ಕಾರಣ ಕೃತ್ಯ ಎಸಗಿದವರು ಅಪ್ರಾಪ್ತರು ಇಷ್ಟು ಮಾತ್ರವಲ್ಲದೆ ಕೃತ್ಯಕ್ಕೆ ಕಾರಣ ಕೇಳಿದಾಗ ಪೊಲೀಸರೇ ದಂಗಾಗಿ ಹೋಗಿದ್ದರು. ಯಾಕೆಂದರೆ ಇವರು ಕ್ರೈಮ್ ಧಾರಾವಾಹಿಯೊಂದನ್ನು ನೋಡಿ ಸಂಚು ರೂಪಿಸಿ ಕೃತ್ಯ ಎಸಗಿರುವುದಾಗಿ ತಿಳಿಸಿದ್ದರು. 

ಹೌದು ಪುಣೆಯಲ್ಲಿ ವಾಸವಾಗಿದ್ದ 70 ವರ್ಷದ ವೃದ್ಧೆಯೊಬ್ಬರು ಬರ್ಬರವಾಗಿ ಹತ್ಯೆಯಾಗಿದ್ದರು. ಒಂಟಿಯಾಗಿ ವಾಸಿಸುತ್ತಿದ್ದ ಈ ವೃದ್ಧೆಯ ಮನೆಯಿಂದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನಾಭರಣಗಳನ್ನು ಜತೆಗೆ ನಗದನ್ನು ದೋಚಲಾಗಿತ್ತು. ಈ ಪ್ರಕರಣದ ಬೆನ್ನತ್ತಿ ಹೋದ ಪೊಲೀಸರಿಗೆ ಈ ಕೊಲೆ ಮಾಡಿದ್ದು 14 ಮತ್ತು 16 ವರ್ಷ ಮಕ್ಕಳು ಎಂಬುದು ತಿಳಿಯುತ್ತದೆ.

ಹೇಗೆಲ್ಲಾ ಕೊಲೆ ಮಾಡಬೇಕು, ಯಾರನ್ನು ಟಾರ್ಗೆಟ್‌ ಮಾಡಬೇಕು ಎಂಬ ಬಗ್ಗೆ ಮೊದಲೇ ಪ್ಲ್ಯಾನ್‌ ಮಾಡಿಕೊಂಡಿದ್ದ ಮಕ್ಕಳು ವೃದ್ಧೆ ಒಂಟಿಯಾಗಿದ್ದ ಅವರ ಮನೆಗೆ ನುಗ್ಗಿ ಕೊಲೆ ಮಾಡಿ ಪರಾರಿಯಾಗಿದ್ದರು. ಮಕ್ಕಳನ್ನು ಹಿಡಿದು ಅವರು ಕೊಲೆ ಮಾಡಿರುವುದು ತಾವೇ ಎಂದು ಒಪ್ಪಿಕೊಂಡಿದ್ದಾರೆ. ಅಲ್ಲದೆ ಈ ಮಕ್ಕಳು ಹಿಂದಿಯ ಜನಪ್ರಿಯ ಕ್ರೈಂ ಥ್ರಿಲ್ಲರ್ ಷೋ ‘ಸಿಐಡಿ’ ನೋಡಿ ಅದರಿಂದ ಪ್ರೇರೇಪಣೆಗೊಂಡು ಈ ರೀತಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಒಂದು ಕೊಲೆ ಪ್ರಕರಣವನ್ನು ಸಿಐಡಿ ತಂಡ ಭೇದಿಸಿದ ಬಳಿಕ ಕೊಲೆಗಾರರು ಹೇಗೆ ಕೊಲೆ ಮಾಡಿದರು, ಯಾವ ರೀತಿ ಸ್ಕೆಚ್‌ ಹಾಕಿಕೊಂಡಿದ್ದರು, ಯಾರನ್ನು ಟಾರ್ಗೆಟ್‌ ಮಾಡುತ್ತಿದ್ದರು ಎಂಬ ಬಗ್ಗೆ ಆ ಷೋ ನಲ್ಲಿ ತೋರಿಸಲಾಗಿತ್ತು. ಅದನ್ನು ನಾವು ತುಂಬಾ ನೋಡುತ್ತಿದ್ದೆವು. ಸುಲಭದಲ್ಲಿ ಶ್ರೀಮಂತರಾಗಲು ಈ ಉಪಾಯ ಬೆಸ್ಟ್‌ ಎನಿಸಿತು. ಒಂಟಿ ವೃದ್ಧೆಯನ್ನು ಟಾರ್ಗೆಟ್‌ ಮಾಡಬೇಕು ಎಂದು ತಿಳಿದು ಈ ರೀತಿ ಮಾಡಿದೆವು ಎಂದು ಬಾಲಕರು ಬಾಯಿಬಿಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!