ಗೋಡೆ ಕುಸಿದು ಗುಜುರಿ ವ್ಯಾಪಾರಿಯ ಸಾವು
ಸುಳ್ಯ, ನ.5: ಗೋಡೆ ಕುಸಿದು ಗುಜುರಿ ವ್ಯಾಪಾರಿಯೊಬ್ಬರು ಮೃತಪಟ್ಟ ಘಟನೆ ಇಂದು ಸುಳ್ಳದಲ್ಲಿ ನಡೆದಿದೆ.
ಅಬ್ದುಲ್ ಖಾದರ್ (48) ಮೃತಪಟ್ಟವರು. ಇವರು ಹಲವಾರು ವರ್ಷಗಳಿಂದ ಸುಳ್ಯದಲ್ಲಿ ಗುಜುರಿ ವ್ಯಾಪಾರ ನಡೆಸುತ್ತಿದ್ದರು. ಕಳೆದ ವರ್ಷ ಮಲ್ನಾಡು ಕ್ಯಾಶ್ಯೂ ಫ್ಯಾಕ್ಟರಿ ವ್ಯವಹಾರ ಸ್ಥಗಿತಗೊಂಡಿದ್ದ ಕಾರಣ ಹಳೆಯ ಕಟ್ಟಡದ ತೆರವುಗೊಳಿಸುವ ಕಾರ್ಯ ಕೈಗೊಂಡಿ ದ್ದರು. ಈ ಹಿನ್ನೆಲೆಯಲ್ಲಿ ಅಬ್ದುಲ್ ಖಾದರ್ ಅವರು ತಮ್ಮ ಕೆಲಸದಾಳುಗಳೊಂದಿಗೆ ಇಂದು ಬೆಳಗ್ಗೆ ಗೋಡೆಯ ಮೇಲ್ಭಾಗದಲ್ಲಿದ್ದ ಕಬ್ಬಿಣದ ಟ್ರಸ್ ಅನ್ನು ಹಗ್ಗ ಹಾಕಿ ಎಳೆಯುತ್ತಿರುವ ಸಂದರ್ಭ ಗೋಡೆ ಮಗುಚಿ ಅಬ್ದುಲ್ ಖಾದರ್ ಅವರ ಮೇಲೆ ಬಿದ್ದಿದೆ. ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಸುಳ್ಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆಂದು ತಿಳಿದು ಬಂದಿದೆ.