ಉಡುಪಿ: ಮಾಂಡವಿ ವಸತಿ ಸಮ್ಮುಚ್ಛಯದಲ್ಲಿ ದೀಪಾವಳಿ ಆಚರಣೆ
ಉಡುಪಿ: ನಗರದ ಅಲಂಕಾರ ಚಲನಚಿತ್ರ ಸಮೀಪದ ಮಾಂಡವಿ ವಸತಿ ಸಮ್ಮುಚ್ಛಯದಲ್ಲಿ ಸೌಹಾರ್ದ ದೀಪಾವಳಿ ಆಚರಣೆ ನಡೆಯಿತು.
ಮುಖ್ಯ ಅತಿಥಿಗಳಾದ ಧಾರವಾಡ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾದ ಪಂಚಾಕ್ಷರೀ ಎಮ್. ಸುವರ್ಣ, ಉಡುಪಿ ಜಿಲ್ಲಾ ಸಹಾಯಕ ಸೆಷನ್ಸ್ ನ್ಯಾಯಾಧೀಶೆ ಕಲ್ಪನಾ ಎರ್ಮಾಳ್ ಜೊತೆಯಾಗಿ ದೀಪ ಬೆಳಗಿಸಿದರು. ದೀಪಾವಳಿ ಹಬ್ಬ ಆಚರಣೆ ಸಾಮರಸ್ಯ ಬೇಸುವ ಕೊಂಡಿಯಾಗಲಿ, ಇದರ ಜೊತೆಗೆ ಬೇರೆ ಧರ್ಮದವರನ್ನು ಗೌರವಸಿ, ಸಂಘಟನೆ ವ್ಯವಸ್ಥೆ ಮಾಡಿದ ನೂತನ ಸಮಿತಿಯನ್ನು ಅಭಿನಂದಿಸಿದರು. ಮಾಂಡವಿ ಬಿಲ್ಡರ್ಸ್ ಮಾಲಕ ಡಾ.ಜೆರಿ ವಿನ್ಸೆಂಟ್ ಡಯಾಸ್ ಮಾತನಾಡಿ ನಮ್ಮ ಸಂಕೀರ್ಣದ ಎಲ್ಲಾ ಹಿಂದೂ,ಮುಸ್ಲಿಂ, ಕ್ರಿಸ್ತರು ಒಂದಾಗಿ ಎಲ್ಲಾ ಧರ್ಮಗಳ ಹಬ್ಬವನ್ನು ಆಚರಿಸೋಣ ಆಗ ನಮ್ಮಲ್ಲಿ ಪರಸ್ಪರ ಹೊಂದಾಣಿಕೆ ನೆಮ್ಮದಿ ಜೀವನ ನೆಡೆಸಲು ದಾರಿ ದೀಪವಾಗುತ್ತದೆ ತಿಳಿಸಿದರು. ಭೂ ಅಭಿವೃದ್ಧಿ ಪ್ರಾಧಿಕಾರದ ಸಹಾಯಕ ಆಯುಕ್ತ ಮೊಹಮ್ಮದ್ ಐಸಾಕ್, ಮಾಂಡವಿ ಕಟ್ಟಡದ ಸೊಸೈಟಿ ಅಧ್ಯಕ್ಷರಾದ ಸುಕುಮಾರ್ ಶೆಟ್ಟಿ, ಕಾರ್ಯದರ್ಶಿ ರಾಘವಾ ನಾಯ್ಕ್, ಫಿಲಿಪ್ ಡಿಸೋಜ, ಮನೋರಂಜನಾ ಕಾರ್ಯಕ್ರಮವನ್ನು ಅರುಣ್ ಐರೋಡಿ ನಡೆಸಿಕೊಟ್ಟರು. ಕಾರ್ಯಕ್ರಮದ ನಿರೊಪಣೆ ಸತೀಶ್ ಹೆಗ್ಡೆ ನಿರ್ವಹಿಸಿದರು. ಹಚ್ಚೇವು ಕನ್ನಡ ಹಾಡಿಗೆ ಮಹಿಳೆಯರು, ಮಕ್ಕಳು ನೂರಾರು ಹಣತೆ ದೀಪ ಬೆಳಗಿಸಿ ಸಂಭ್ರಮಿಸಿದರು.ಮಕ್ಕಳಿಂದ ಮನೋರಂಜನೆ ಕಾರ್ಯಕ್ರಮ ಬಳಿಕ ಸುಡುಮದ್ದು ಪ್ರದರ್ಶನ ಜರಗಿತು.