ದಿ.ಸಿಸಿಲಿಯ ಆಳ್ವ ಸ್ಮಾರಕ ಬಸ್ ನಿಲ್ದಾಣ ಲೋಕಾರ್ಪಣೆ
ಉಡುಪಿ ನ.5(ಉಡುಪಿ ಟೈಮ್ಸ್ ವರದಿ): ಕುರ್ಕಾಲು ಗ್ರಾಮದ ಸುಭಾಷ್ ನಗರದಲ್ಲಿ ದಿವಂಗತ ಸಿಸಿಲಿಯಾ ಆಳ್ವ ಸ್ಮಾರಕ ಬಸ್ ನಿಲ್ದಾಣ ಇಂದು ಬೆಳಗ್ಗೆ 10 ಗಂಟೆಗೆ ಲೋಕಾರ್ಪಣೆಗೊಂಡಿತು.
ದಾನಿಗಳಾದ ಫಿಲೋಮಿನ ಆಳ್ವಾ ಅವರು ರಿಬ್ಬನ್ ಕತ್ತರಿಸುವ ಮೂಲಕ ಬಸ್ ನಿಲ್ದಾಣವನ್ನು ಉದ್ಘಾಟಿಸಿದರು. ಹಾಗೂ ಕುರ್ಕಾಲು ಗ್ರಾಮದ ಪ್ರಥಮ ಪ್ರಜೆ ಪಂಚಾಯತ್ ಅಧ್ಯಕ್ಷ ಮಹೇಶ ಶೆಟ್ಟಿ ಬಿಳಿಯಾರು ಅವರು ದೀಪ ಬೆಳಗುವುದರ ಮೂಲಕ ದೀಪಾವಳಿಯ ಶುಭಾಶಯಗಳನ್ನು ಕೋರಿದರು.
ಈ ವೇಳೆ ಬಸ್ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಂಕರಪುರ ಚರ್ಚಿನ ಧರ್ಮಗುರುಗಳಾದ ರೆವರೆಂಡ್ ಫಾದರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಅವರು ಆಶೀರ್ವಚನ ನೀಡಿ ಹಾರೈಸಿದರು. ಕಾರ್ಯಕ್ರಮದಲ್ಲಿ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ಪರವಾಗಿ ದಾನಿಗಳಾದ ಫಿಲೋಮಿನಾ ಆಳ್ವ ಅವರನ್ನು ಗೌರವಿಸಿ ಸನ್ಮಾನಿಸ ಲಾಯಿತು. ಈ ವೇಳೆ ನಾಗರಿಕ ಸಮಿತಿ ಸರಕಾರಿಗುಡ್ಡೆ ಅಧ್ಯಕ್ಷರಾದ ಆ್ಯಂಟನಿ ಡೇಸಾ, ಕಟಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಅಬೂಬಕರ್ ಎ ಆರ್, ನವೀನ್ ಅಮೀನ್ ಶಂಕರಪುರ, ನಿವೃತ್ತ ಮುಖ್ಯೋಪಾಧ್ಯಾಯರಾದ ಮೋಹನ್ ದಾಸ್ ಶೆಟ್ಟಿ ಅವರು ಕಾರ್ಯಕ್ರಮ ದಲ್ಲಿ ಭಾಗವಹಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕುರ್ಕಾಲು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸಿಮ್ಮಿ ಮಾರ್ಗರೇಟ್ ಡಿಸೋಜಾ, ಕುರ್ಕಾಲು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಶೋಭಾ ಸಾಲಿಯಾನ್, ಫೆಲೋ ಟೈಮ್ ಸಿಸ್ಟರ್ಸ್ ಉದ್ಯಾವರ, ಗಣ್ಯರಾದ ಶಿವಾನಂದ, ಬಶೀರ್ ಸಾಹೇಬ್, ಕುರ್ಕಾಲು ಗ್ರಾಮ ಪಂಚಾಯತ್ ಸದಸ್ಯ ಸುದರ್ಶನ್ ರಾವ್, ಕಟಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಶಾಲಿನಿ ಚಂದ್ರ ಪೂಜಾರಿ, ಪ್ರಭಾಕರ ಆಚಾರ್ಯ, ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷರಾದ ದಿನೇಶ್ ಕುಂಜಾರುಗಿರಿ ಹಾಗೂ ರೋಟರ್ಯಾಕ್ಟ್ ಕ್ಲಬ್ ಅಧ್ಯಕ್ಷರಾದ ಕವನ್ ಪೂಜಾರಿ ಮತ್ತು ಸದಸ್ಯರು ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘದ ಗೌರವ ಸಲಹೆಗಾರ ಭಾಸ್ಕರ ಸನಿಲ್ ರೊನಾಲ್ಡ್ ಸೋನ್ಸ್, ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘದ ಗೌರವಾಧ್ಯಕ್ಷರಾದ ಭುವನೇಶ್ ಎಲ್. ಪೂಜಾರಿ, ಚಿದಾನಂದ, ಚಂದ್ರಪೂಜಾರಿ, ಇಗ್ನೇಷಿಯಸ್ ಆಳ್ವ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.