ತ್ಯಾಜ ಎಸೆದವರಿಂದಲೇ ಸ್ವಚ್ಛಗೊಳಿಸುವಂತೆ ಮಾಡಿದ ಉಡುಪಿ ನಗರ ಸಭೆ
ಉಡುಪಿ ನ.5(ಉಡುಪಿ ಟೈಮ್ಸ್ ವರದಿ): ಉಡುಪಿಯಲ್ಲಿ ಎಲ್ಲೆಂದರಲ್ಲಿ ತ್ಯಾಜ ಎಸೆದು ಪರಿಸರ ಹಾಳು ಮಾಡುತ್ತಿದ್ದವರಿಗೆ ಪಾಠ ಕಲಿಸಲು ದಂಡ ವಿಧಿಸುವ ಜೊತೆಗೆ ಕಸ ಎಸೆದವರಿಂದಲೇ ಸ್ವಚ್ಛಗೊಳಿಸುವ ಕಾರ್ಯ ನಗರ ಸಭೆ ಕೈಗೊಂಡಿದೆ.
ಅದರಂತೆ ಕರಾವಳಿ ಬೈಪಾಸ್ ಬಳಿ ರಾತ್ರಿ ಕಟ್ಟಡದ ಭಗ್ನಾವಶೇಷವನ್ನು ಎಸೆದು ಹೋಗಿದ್ದವರನ್ನು ಪತ್ತೆ ಹಚ್ಚಿ ಅವರಿಂದಲೇ ಸ್ವಚ್ಛಗೊಳಿಸಲು ಕ್ರಮ ವಹಿಸಲಾಯಿತು.
ಇದರೊಂದಿಗೆ ನಿನ್ನೆ ಸಂತೆಕಟ್ಟೆಯಲ್ಲಿ ಹಾಗೂ ಇಂದು ಎಪಿಎಂ ಮಾರುಕಟ್ಟೆ ಬಳಿ ವಾಹನವೊಂದರಲ್ಲಿ ಲೈನ್ ಸೇಲ್ ಮಾಡುತ್ತಿದ್ದ ನಿಷೇಧಿತ ಪ್ಲಾಸ್ಟಿಕ್ ಅಂದಾಜು 200 ಕೆ.ಜಿ ವಶಪಡಿಸಿಕೊಂಡು ತ್ಯಾಜ್ಯ ಎಸೆದ ಇಬ್ಬರಿಂದಲೂ ತಲಾ 5000 ರೂ. ದಂಡ ವಸೂಲಿ ಮಾಡಲಾಗಿದೆ. ಈಗಾಗಲೇ ನಗರದಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವವರಿಗೆ ದಂಡ ವಿಧಿಸಲಾಗುತ್ತಿದ್ದರೂ ತಮ್ಮ ಪರಿಸರದ ತ್ಯಾಜ್ಯ, ಕಸವನ್ನು ತಂದು ಇತರೆಡೆಗೆ ಎಸೆದು ಹೋಗುತ್ತೀರುವ ಸಂಖ್ಯೆ ಮಾತ್ರ ಕಡಿಮೆ ಆಗುತ್ತಿಲ್ಲ ಎಂಬುದು ಬೇಸರದ ಸಂಗತಿಯಾಗಿದೆ.