ಸಚಿವ ಕೋಟ ಶ್ರೀನಿವಾಸ ಪೂಜಾರಿ ಟ್ವೀಟರ್ ಖಾತೆ ಹ್ಯಾಕ್

ಉಡುಪಿ ನ.5 : ಸಮಾಜ ಕಲ್ಯಾಣ ಮತ್ತು‌ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಅಧೀಕೃತ ಟ್ವೀಟರ್ ಖಾತೆ ಹ್ಯಾಕ್ ಎಂದು ವರದಿಯಾಗಿದೆ.
ಈ ಬಗ್ಗೆ ಖುದ್ದು ಸಚಿವರೇ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, “ನನ್ನ ಅಧಿಕೃತ ಟ್ವಿಟರ್ ಖಾತೆಯು ಹ್ಯಾಕ್ ಆಗಿದ್ದು ಈಗಾಗಲೇ ಪರಿಶೀಲನೆಗೆ ಮನವಿ ಮಾಡಲಾಗಿದೆ. ನಾನು ಅಧಿಕೃತವಾಗಿ ಘೋಷಿಸುವವರೆಗೂ ಟ್ವಿಟರ್ ಮೂಲಕ ಬರುವ ಯಾವುದೇ ಸಂದೇಶಗಳನ್ನು ಪರಿಗಣಿಸಬಾರದೆಂದು ಮನವಿ ಮಾಡುತ್ತೇನೆ” ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!