ಬೈಂದೂರು: ವ್ಯಕ್ತಿ ಆತ್ಮಹತ್ಯೆ
ಬೈಂದೂರು ನ.5 (ಉಡುಪಿ ಟೈಮ್ಸ್ ವರದಿ): ಸಾಲ ತೀರಿಸಲಾಗದೆ ನೊಂದು ಬಾವಿಗೆ ಹಾರಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೈಂದೂರಿನ ಯಡ್ತರೆ ಗ್ರಾಮದಲ್ಲಿ ನಡೆದಿದೆ.
ರಾಮ ಗಾಣಿಗ (78) ಆತ್ಮಹತ್ಯೆ ಮಾಡಿಕೊಂಡವರು. ಇವರು ತಾವು ಮಾಡಿದ್ದ ಕೈ ಸಾಲ ಹಾಗೂ ಬ್ಯಾಂಕಿನಲ್ಲಿ ಮಾಡಿದ್ದ ಸಾಲ ತೀರಿಸಲಾಗದೇ ಜೀವನದಲ್ಲಿ ಜಿಗುಪ್ಸೆಗೊಂಡು ನಿನ್ನೆ ಬೆಳಿಗ್ಗೆ10 ಗಂಟೆ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಮಗ ಅಣ್ಣಪ್ಪ ಗಾಣಿಗ ಅವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.