ಉಡುಪಿ: ಬಾರ್ ಮ್ಯಾನೇಜರ್, ಕಾರ್ಮಿಕನ ಕೊಲೆ ಯತ್ನ
ಉಡುಪಿ ನ.4 (ಉಡುಪಿ ಟೈಮ್ಸ್ ವರದಿ): ಗುಂಡಿಬೈಲಿನ ಬಾರ್ ಆಂಡ್ ರೆಸ್ಟೋರೆಂಟ್ ವೊಂದರ ಮ್ಯಾನೇಜರ್ ಹಾಗೂ ಕೆಲಸಗಾರರ ಮೇಲೆ ಕೊಲೆ ಯತ್ನ ನಡೆಸಿ ಹಲ್ಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ಈ ಬಗ್ಗೆ ಬಾರ್ ನ ಮ್ಯಾನೇಜರ್ ಮಹೇಶ. ಹೆಚ್.ಎನ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ನಿನ್ನೆ ಆರೋಪಿ ರಾಕೇಶ್ ಯಾನೆ ರಾಕಿ ಎಂಬಾತ ಇತರ ಇಬ್ಬರು ಆರೋಪಿಗಳೊಂದಿಗೆ ಸೇರಿಕೊಂಡು ಮಹೇಶ್ ಹಾಗೂ ಅವರ ಕೆಲಸಗಾರರಾದ ವಾಲ್ಟರ್ ಡಿಸೋಜ ಮತ್ತು ಶರಣಪ್ಪ ಎಂಬುವವರಿಗೆ ಬಿಯರ್ ಬಾಟಲಿಯಿಂದ ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ನಡೆಸಿದ್ದಾರೆ. ಹಾಗೂ ಹಲ್ಲೆಯಿಂದ ಮೂವರಿಗೂ ಗಾಯವಾಗಿದ್ದು ಉಡುಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.