ಕಾರ್ಕಳ: ಭಜರಂಗದಳದ ಸಂಚಾಲಕನಿಂದ ವಿವಾಹಿತೆಯ ಅಪಹರಣ

ಉಡುಪಿ ನ.4: ಕಾರ್ಕಳದ ವಿಶ್ವಹಿಂದು ಪರಿಷದ್ ಭಜರಂಗದಳದ ಸಂಚಾಲಕನೋರ್ವ ವಿವಾಹಿತೆಯನ್ನು ಅಪಹರಿಸಿರುವ ಕುರಿತು ಮೂಡಬಿದಿರೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾರ್ಕಳ ಬಜರಂಗದಳದ ಭಜಗೋಳಿ ವಲಯ ಸಹ ಸಂಚಾಲಕನಾಗಿರುವ ಸಂದೀಪ್ ಆಚಾರ್ಯ ಎಂಬಾತನ ವಿರುದ್ಧ ಮಹಿಳೆ ಅಪಹರಣ ದೂರು ದಾಖಲಾಗಿದೆ.

ಈ ಬಗ್ಗೆ ಮಹಿಳೆಯ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ಶಿರ್ಲಾಲು ಹೈಸ್ಕೂಲ್ ಬಳಿ ಹಾಡಿಯಂಗಡಿ ಎಂಬಲ್ಲಿ ವಾಸವಾಗಿರುವ ಭಜರಂಗದಳದ ಕಾರ್ಯಕರ್ತ ಹರೀಶ್ ಎಂಬವರ ಪತ್ನಿ 2 ವರ್ಷದ ಮಗುವಿನ ತಾಯಿಯಾಗಿದ್ದು, ಒಂದು ವಾರದ ಹಿಂದೆ ತನ್ನ ತವರು ಮನೆಗೆ ಹೋಗಿದ್ದ ವೇಳೆ ಕಾರ್ಕಳ ಭಜರಂಗದಳದ ಭಜಗೋಳಿ ವಲಯ ಸಹ ಸಂಚಾಲಕನಾಗಿರುವ ಸಂದೀಪ್ ಆಚಾರ್ಯ ಅಪಹರಿಸಿದ್ದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಮೂಡಬಿದಿರೆ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!