ಮನೆ ಮನೆಗಳಲ್ಲಿ ಕನ್ನಡದ ಬಳಕೆ ಆಗಬೇಕು: ವಿ.ಸುನೀಲ್ ಕುಮಾರ್

ಉಡುಪಿ, ನ.03: ರಾಜ್ಯದ ಮನೆ ಮನೆಗಳಲ್ಲಿ ಕನ್ನಡದ ಬಳಕೆ ಆಗಬೇಕು, ಮಕ್ಕಳಿಗೆ ಕನ್ನಡ ಭಾವಗೀತೆಗಳನ್ನು ಕೇಳಿಸಬೇಕು ಕುಟುಂಬ ಸದಸ್ಯರೊಂದಿಗೆ ಕನ್ನಡದಲ್ಲಿ ಮಾತನಾಡಬೇಕು, ಕನ್ನಡ ಬಳಕೆಯ ಮಧ್ಯದಲ್ಲಿ ಅನ್ಯಭಾಷೆಯ ಪ್ರಯೋಗ ಸಲ್ಲದು ಎಂದು ಸಚಿವರು ಹೇಳಿದರು.

ಅವರು  ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಉಡುಪಿ ವಲಯ ಪ್ರಸ್ತುತಿ ಪಡಿಸಿದ “ಕನ್ನಡಕ್ಕಾಗಿ ನಾವು” ಒಂದು ಅಪೂರ್ವ  ಅಭಿಯಾನ- ಗೀತಗಾಯನ ವಿಡಿಯೋ ಆಲ್ಬಮ್ ಲೋಕಾರ್ಪಣೆಗೊಳಿಸಿ ಮಾತಾಡಿದರು. ಈ ಅಭಿಯಾನದಲ್ಲಿ ಕೈಜೋಡಿಸಿಡಾ ಛಾಯಾಗ್ರಾಹಕರು ಅಭಿನಂದನಾರ್ಹರು ಎಂದರು. 

ಈ ಸಂದರ್ಭದಲ್ಲಿ  ಉಡುಪಿ ಶಾಸಕ ಕೆ. ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ,  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ, ಅಪಾರ ಜಿಲ್ಲಾಧಿಕಾರಿ ಸದಾಶಿವ ಪ್ರಭು,  ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್ , ಜಿಲ್ಲಾಧ್ಯಕ್ಷ ಶ್ರೀ ಕರಂದಾಡಿ ಶ್ರೀಧರ್ ಶೆಟ್ಟಿಗಾರ್, ಶ್ರೀ ಕೆ.ವಾಸುದೇವ ರಾವ್, ವಲಯಾಧ್ಯಕ್ಷ ಜನಾರ್ದನ್ ಕೊಡವೂರು, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕೊರೆಯ, ಕಾರ್ಯಕ್ರಮ ಸಂಚಾಲಕ ಪ್ರವೀಣ್ ಹೂಡೆ ನಿಕಟಪೂರ್ವ ಅಧ್ಯಕ್ಷ  ಪ್ರಕಾಶ್ ಕೊಡಂಕೂರ್, ಕಾರ್ಯದರ್ಶಿ ಸುಕೇಶ್ ಅಮೀನ್ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!