ರಾಷ್ಟ್ರೀಯ ಯೋಗಾಸನ ಸ್ಪರ್ಧೆ: ದ್ವಿತೀಯ ಸ್ಥಾನ ಪಡೆದ ವಿದ್ಯೋದಯ ಪಬ್ಲಿಕ್ ಸ್ಕೂಲ್ ಶಿವಾನಿ
ಕಾರ್ಕಳ ಅ.31(ಉಡುಪಿ ಟೈಮ್ಸ್ ವರದಿ): ಯೋಗ ಪಟು ಶಿವಾನಿ ಶೆಟ್ಟಿ ಅವರು ರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆಯ ವತಿಯಿಂದ ನಡೆದ ರಾಜ್ಯ ಮಟ್ಟದ ಯೋಗಾಸನ ಮತ್ತು ಆರ್ಟಿಸ್ಟಿಕ್ ಸ್ಪರ್ಧೆಯಲ್ಲಿ ಭಾಗವಹಿಸಿ ಸೆಮಿಫೈನಲ್ ಹಂತದವರೆಗೆ ತಲುಪಿ ರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಶಿವಾನಿ ಶೆಟ್ಟಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಹೆಬ್ರಿಯ ಕುಚ್ಚೂರಿನ ಸುಜಾತ ಶೆಟ್ಟಿ ಹಾಗೂ ಶಿವಾನಂದ ಶೆಟ್ಟಿ ದಂಪತಿಗಳ ಪುತ್ರಿಯಾಗಿರುವ ಶಿವಾನಿ ಶೆಟ್ಟಿ ಅವರು ವಿದ್ಯೋದಯ ಪಬ್ಲಿಕ್ ಸ್ಕೂಲ್ ಉಡುಪಿಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಳೆ. ಅವರಿಗೆ ಯೋಗ ವಿಜ್ಞಾನಿಯಾಗುವ ಕನಸಿದ್ದು, ಇದಕ್ಕಾಗಿ ಇವರು ಕಾರ್ಕಳದ ಕೆ ನರೇಂದ್ರ ಕಾಮತ್ ಅವರಿಂದ ಯೋಗ ಶಿಕ್ಷಣ ತರಬೇತಿಯನ್ನು ಪಡೆಯುತ್ತಿದ್ದಾರೆ.
ಈಗ ನಡೆಯುತ್ತಿರುವ ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆಯ ರಾಜ್ಯ ಮಟ್ಟದ ಯೋಗಾಸನ ಮತ್ತು ಆರ್ಟಿಸ್ಟಿಕ್ ಸ್ಫರ್ಧೆಯಲ್ಲಿ 9-14 ವಯೋಮಿತಿಯ ವಿಭಾಗದಲ್ಲಿ ಸೆಮಿಫೈನಲ್ ವರೆಗೆ ತಲುಪಿ ಸಾಧನೆಯನ್ನು ಮಾಡಿದ್ದಾರೆ.ಹಾಗೂ ರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ದ್ವಿತೀಯ ಮತ್ತು ಸೂರ್ಯ ನಮಸ್ಕಾರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಇವರ ಸಾಧನೆ ಗೆ ಇವರ ಪೋಷಕರು ಹಾಗೂ ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು ಶುಭ ಹಾರೈಸಿದ್ದಾರೆ.