ಬ್ರಹ್ಮಾವರ: ಮಹಿಳೆಆತ್ಮಹತ್ಯೆ
ಬ್ರಹ್ಮಾವರ ಅ.31(ಉಡುಪಿ ಟೈಮ್ಸ್ ವರದಿ): ಬಾವಿಗೆ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬ್ರಹ್ಮಾವರದ ಹನೇಹಳ್ಳಿ ಗ್ರಾಮದ ಮಾಸ್ತಿ ನಗರದಲ್ಲಿ ನಡೆದಿದೆ.
ಜ್ಯೋತಿ (39) ಆತ್ಮಹತ್ಯೆ ಮಾಡಿಕೊಂಡವರು. ಇವರು ತಮಗಿದ್ದ ಮಾನಸಿಕ ಖಾಯಿಲೇಯಿಂದಲೋ ಅಥವಾ ಇನ್ಯಾವುದೋ ಹೇಳಿಕೊಳ್ಳಲಾಗದ ಕಾರಣದಿಂದಲೋ ಜೀವನದಲ್ಲಿ ಜೀಗುಪ್ಸೆಗೊಂಡು ಇಂದು ಮಾಸ್ತಿನಗರದಲ್ಲಿ ಬಾವಿಯ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.