ಕ್ರೆಡಿಟ್ ಕಾರ್ಡ್’ನ ಕ್ಯಾಶ್, ಕ್ರೆಡಿಟ್ ಲಿಮಿಟ್ ಜಾಸ್ತಿ ಮಾಡುವುದಾಗಿ ನಂಬಿಸಿ ಮಹಿಳೆಗೆ ಲಕ್ಷಾಂತರ ರೂ. ವಂಚನೆ

ಮಂಗಳೂರು ಅ,31: ಕ್ರೆಡಿಟ್ ಕಾರ್ಡ್‍ನ ಕ್ಯಾಶ್ ಮತ್ತು ಕ್ರೆಡಿಟ್ ಲಿಮಿಟ್ ಜಾಸ್ತಿ ಮಾಡುವುದಾಗಿ ನಂಬಿಸಿ ವಂಚಿಸಿರುವ ಘಟನೆ ಮಂಗಳೂರು ನಗರದಲ್ಲಿ ನಡೆದಿದೆ.

ಈ ಬಗ್ಗೆ ವಂಚನೆಗೆ ಒಳಗಾದವರು ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ದೂರು ದಾರರು ಎಸ್‍ಬಿಐ ಕ್ರೆಡಿಟ್ ಕಾರ್ಡ್‍ನ್ನು ಹೊಂದಿದ್ದು, ಅ.29 ರಂದು ಅವರ ಮೊಬೈಲ್‍ಗೆ ಮಹಿಳೆಯೊಬ್ಬರು ಕರೆ ಮಾಡಿ ತಾನು ಎಸ್‍ಬಿಐ ಕ್ರೆಡಿಟ್ ಕಾರ್ಡ್ ಕಚೇರಿಯಿಂದ ಕರೆ ಮಾಡುವುದಾಗಿ ನಂಬಿಸಿದ್ದಾರೆ. ಬಳಿಕ ತಾನು ಕ್ರೆಡಿಟ್ ಕಾರ್ಡ್ ಪರಿಶೀಲನೆ ಬಗ್ಗೆ ಕರೆ ಮಾಡಿದ್ದು, ನಿಮ್ಮ ಕ್ಯಾಶ್ ಮತ್ತು ಕ್ರೆಡಿಟ್ ಲಿಮಿಟ್ ಜಾಸ್ತಿ ಮಾಡುವುದಾಗಿ ತಿಳಿಸಿ,ನಂತರ ಒಟಿಪಿ ಶೇರ್ ಮಾಡಲು ತಿಳಿಸಿದ್ದಾರೆ. ಅದರಂತೆ ಒಟಿಪಿ ನಂಬರ್ ನೀಡಿದ ಕೂಡಲೇ ದೂರುದಾರರ ಖಾತೆಯಿಂದ 99,274ರೂ. ವರ್ಗಾವಣೆಯಾಗಿದೆ. ತದನಂತರ ಕ್ರೆಡಿಟ್‍ಕಾರ್ಡ್‍ನಿಂದ ಹಂತಹಂತವಾಗಿ ಒಟ್ಟು 6,94,918 ರೂ.ವರ್ಗಾವಣೆ ಮಾಡಲಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.ಈಬಗ್ಗೆ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!