ವಿಶೇಷ ರೀತಿಯಲ್ಲಿ ಪುತ್ರನ ಹುಟ್ಟು ಹಬ್ಬ ಆಚರಿಸಿದ ಶಾಸಕ ರಘುಪತಿ ಭಟ್
ಉಡುಪಿ ಅ.31(ಉಡುಪಿ ಟೈಮ್ಸ್ ವರದಿ): ಪ್ರತೀ ವರ್ಷ ವಿವಿಧ ಕಡೆಗಳಲ್ಲಿ ತಮ್ಮ ಮಗನ ಹುಟ್ಟು ಹಬ್ಬವನ್ನು ಅರ್ಥ ಪೂರ್ಣವಾಗಿ ಆಚರಿಸುವ ಉಡುಪಿ ಶಾಸಕ ರಘುಪತಿ ಭಟ್ ಅವರು ಈ ಭಾರಿ ಮಗ ರೆಯ್ಯಾಂನ್ಶ್ ಅವರ 8ನೇ ವರ್ಷದ ಹುಟ್ಟು ಹಬ್ಬವನ್ನು ಇಂದ್ರಾಳಿ ವಾರ್ಡಿನ ಮಂಜುಶ್ರೀ ನಗರದ ಕೊರಗರ ಕಾಲೋನಿಯಲ್ಲಿ ಆಚರಿಸಿದರು.
ಈ ವೇಳೆ ಮಾತನಾಡಿದ ಅವರು, ಮಂಜುಶ್ರೀ ನಗರದ ಕೊರಗ ಸಮುದಾಯದೊಂದಿಗೆ ನಮಗೆ ನಿಖಟ ಸಂಬಂದವಿದೆ. ಕೊರಗ ಸಮುದಾಯದ ಅಭಿವೃದ್ದಿಗೆ ಅನೇಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹಾಗೂ ಮುಂದಿನ ದಿನಗಳಲ್ಲಿ ಸಮುದಾಯದ ಎಲ್ಲಾ ಮಕ್ಕಳು ಸುಶಿಕ್ಷಿತರಾಗುವಂತಾಗಬೇಕು ಎಂದು ಹಾರೈಸಿದರು.
ಇದೇ ವೇಳೆ ಅಸ್ಪøಶ್ಯತೆ ಹಿಂದೂ ಸಮಾಜಕ್ಕೆ ಕಳಂಕ ಇದರಿಂದ ಅನೇಕ ಸಮುದಾಯವನ್ನು ಕಳೆದುಕೊಂಡಿದ್ದೇವೆ ಎಂದ ಅವರು, ಹಿಂದೆ ಸಮಾಜದಲ್ಲಿ ಕೊರಗ ಸಮುದಾಯವನ್ನು ಕೀಳಾಗಿ ನೋಡುತ್ತಿದ್ದರು.ಆದರೆ ಇಂದು ಸಮಾಜದಲ್ಲಿ ಬದಲಾವಣೆಗಳಾಗುತ್ತಿದೆ ಕೊರಗರು ಕೀಳು ಬಾವನೆಯಲ್ಲಿ ಇರಬಾರದು ಬದಲಾಗಿಗೆ ಕೊರಗರನ್ನು ಕೀಳಾಗಿ ಕಾಣುವವರು ನಿಜವಾಗಿ ಸಣ್ಣತನದ ವ್ಯಕ್ತಿಗಳು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಭೇದ ಭಾವವನ್ನು ತೊಗಿಸಬೇಕು ಎಂಬ ಸಂದೇಶ ಸಾರುವ ಹಿನ್ನೆಲೆ ಯಲ್ಲಿ ತಮ್ಮ ಮಗನ ಹುಟ್ಟು ಹಬ್ಬವನ್ನು ಕೊರಗ ಸಮುದಾಯದೊಂದಿಗೆ ಆಚರಿಸುತ್ತಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ ಅವರು, ಸಮುದಾಯದ ಗುರಿಕಾರರಾದ ಸುಂದರ ಅವರನ್ನು ಇಂದ್ರಾಳಿ ಪಂಚ ದುರ್ಗಾಪರಮೇಶ್ವರಿ ದೇವಸ್ಥಾನದ ಸಮಿತಿಯ ಸದಸ್ಯರನ್ನಾಗಿ ನೇಮಿಸಿರುವುದಾಗಿ ಘೋಷಣೆ ಮಾಡಿದರು.
ಈ ವೇಳೆ ಮಂಜುಶ್ರೀ ನಗರದ ಕೊರಗ ಕಾಲೋನಿಯ ಅಂಬೆಡ್ಕರ್ ಭವನಕ್ಕೆ ಆವರಣ ಗೋಡೆ ನಿರ್ಮಿಸು ಬಗ್ಗೆ ಸಮುದಾಯದ ಗುರಿಕಾರರಾದ ಸುಂದರ ಅವರು ಶಾಸಕರಿಗೆ ಮನವಿ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮಗನೊಂದಿಗೆ ಕೇಕ್ ಕತ್ತರಿಸಿ ಮಗನ ಹುಟ್ಟು ಹಬ್ಬ ಅಚರಿಸಿದ ಅವರು, ಸಮುದಾಯದ ವಿದ್ಯಾರ್ಥಿಗಳಿಗೆ ಉಡುಗೊರೆಯನ್ನು ವಿತರಿಸಿ ಸಮುದಾಯದೊಂದಿಗೆ ಕುಟುಂಬ ಸಮೇತರಾಗಿ ಭೋಜನ ಸವಿದರು.
ಈ ಸಂದರ್ಭದಲ್ಲಿ ಉಡುಪಿ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಗಿರೀಶ್ ಅಂಚನ್, ಸ್ಥಳೀಯ ನಗರಸಭಾ ಸದಸ್ಯರಾದ ಅಶೋಕ್ ನಾಯ್ಕ್, ಬೂತ್ ಅಧ್ಯಕ್ಷರಾದ ರವೀಂದ್ರ ನಾಯ್ಕ್, ಸ್ಥಳೀಯರಾದ ರತ್ನಾಕರ ಇಂದ್ರಾಳಿ, ಅಶೋಕ್ ಕಿಣಿ, ಪ್ರಭಾಕರ ಶೆಟ್ಟಿ, ಸೀತಾರಾಮ ನಾಯ್ಕ್, ಅರವಿಂದ್ ಶೆಟ್ಟಿ, ಹರೀಶ್ ದೇವಾಡಿಗ, ಸುಜಲ ಸತೀಶ, ಸತೀಶ್ ಕುಡ್ವ, ಶಾಸಕರ ಪತ್ನಿ ಶಿಲ್ಪಾ ಆರ್. ಭಟ್ ಹಾಗೂ ಕುಟುಂಬದವರು ಉಪಸ್ಥಿತರಿದ್ದರು.