ಉಡುಪಿ ರಥಬೀದಿ ಬಳಿ ಮತ್ತೊಂದು ಗೆಟ್..! ಕಣ್ಣುಮುಚ್ಚಿ ಕುಳಿತ ನಗರ ಸಭೆ!

ಉಡುಪಿ ಅ.25: ವಾಹನ ದಟ್ಟಣೆ ಹೆಚ್ಚಾದ ಹಿನ್ನೆಲೆ ರಥಬೀದಿಯ ಅದಮಾರು ಮಠದ ಓಣಿ ರಸ್ತೆಗೆ ಗೇಟು ಅಳವಡಿಸಲಾಗಿದೆ.

ಹೌದು ರಥಬೀದಿಗೆ ಸೇರುವ ಅದಮಾರು ಮಠದ ಓಣಿಯಲ್ಲಿ ವಾಹನಗಳ ದಟ್ಟಣೆಯಿಂದಾಗಿ ರಸ್ತೆಯಲ್ಲಿ ಯಾರೊಬ್ಬರಿಗೂ ನಡೆದುಕೊಂಡು ಹೋಗಲಾಗದ ಪರಿಸ್ಥಿತಿ ಮತ್ತು ಉತ್ಸವ ಹಾಗೂ ಇತರ ಪ್ರಮುಖ ದಿನಗಳಲ್ಲಿ ವಾಹನ ಮಾಲಿಕರು ಈ ರಸ್ತೆಯಲ್ಲಿ ಅಡ್ಡದಿಡ್ಡಿಯಾಗಿ ವಾಹನವನ್ನು ನಿಲ್ಲಿಸಿಹೋಗುವುದು ಮತ್ತು ಕುಡುಕರು ಈ ರಸ್ತೆಯಲ್ಲಿ ಮಲಗುವುದು ಮತ್ತು ಜಗಳವಾಡಿ ಕೊಳ್ಳುವುದರಿಂದಾಗಿ ಮಹಿಳೆಯರು, ಸಾಮಾನ್ಯ ಜನರ ಸಂಚಾರಕ್ಕೆ ತೊಂದರೆಯಾಗುತ್ತಿರುವ ಕಾರಣದಿಂದ ಇದೀಗ ಕ್ಯಾಸೆಟ್ ಕಾರ್ನರ್ ನ ಮುಂಭಾಗದಲ್ಲಿ ವಾಹನಗಳು ನಿಲ್ಲಸದ ಹಾಗೆ ಮತ್ತು ಜನರು ಯಾವುದೇ ತೊಂದರೆಯಿಲ್ಲದೇ ನಡೆದುಕೊಂಡು ಹೋಗಲು ಅನುಕೂಲವಾಗುವಂತೆ ರಸ್ತೆಗೆ ಅಡ್ಡವಾಗಿ ಗೇಟನ್ನು ನಿರ್ಮಿಸಲಾಗಿದೆ. ಆದ್ದರಿಂದ ಮುಂದಿನದಿನಗಳಲ್ಲಿ ಈ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸುವಂತಿಲ್ಲ.

ಈ ನಡುವೆ ಈ ರಸ್ತೆಯು ನಗರಸಭೆಗೆ ಸೇರಿದ ರಸ್ತೆಯಾಗಿರುವಾಗ ಇಲ್ಲಿ ಯಾರ ಅನುಮತಿಯ ಮೇರೆಗೆ ಗೇಟನ್ನು ಹಾಕಲಾಗಿದೆ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರಿಂದ ಅದಮಾರು ಮಠದ ಗೆಸ್ಟ್ ಹೌಸ್ ರಸ್ತೆ ದಿನ ನಿತ್ಯ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ.

ಹಿಂದೊಮ್ಮೆ ಇಲ್ಲಿ ವಾಹನವನ್ನು ನಿಲ್ಲಿಸಿದಾಗ ನಗರಸಭೆಯ ವತಿಯಿಂದ ಸುಂಕವನ್ನು ವಸೂಲಿ ಮಾಡಲಾಗುತಿತ್ತು.

ವಾಹನ ದಟ್ಟಣೆ ಕಾರಣದಿಂದ ಉಡುಪಿಯ ಶ್ರೀಕೃಷ್ಣಮಠದ ಅದಮಾರು ಮಠದ ಓಣಿ ರಸ್ತೆಗೆ ಹಾಕಲಾಗಿರುವ ಗೇಟಿನ ವಿಚಾರವಾಗಿ ನಗರ ಸಭಾಧ್ಯಕ್ಷೆ ಸುಮಿತ್ರಾ ಆರ್ ನಾಯಕ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಉಡುಪಿ ಟೈಮ್ಸ್ ಜೊತೆ ಮಾತನಾಡಿದ ಅವರು, ಅದಮಾರು ಮಠದ ಓಣಿ ರಸ್ತೆಗೆ ಹಾಕಿರುವ ವಿಚಾರವಾಗಿ ನಗರ ಸಭೆಯಿಂದ ಯಾವುದೇ ಅನುಮತಿ ಪಡೆದಿಲ್ಲ ಎಂದು ತಿಳಿಸಿದರು. ಹಾಗೂ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುವುದಾಗಿಯೂ ಅವರು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!