ಅ.24 ರಂದು ಸಂತೆಕಟ್ಟೆ ಜಂಕ್ಷನ್ ಸೇತುವೆ ನಿರ್ಮಾಣ ಮತ್ತು ಅಭಿವೃದ್ಧಿಯ ಸಾಧಕ ಬಾಧಕಗಳ ಚರ್ಚೆ

ಉಡುಪಿ ಅ.23(ಉಡುಪಿ ಟೈಮ್ಸ್ ವರದಿ): ಸಂತೆಕಟ್ಟೆ ಜಂಕ್ಷನ್ ಸೇತುವೆ ನಿರ್ಮಾಣ ಮತ್ತು ಅಭಿವೃದ್ಧಿಯ ಸಾಧಕ ಬಾಧಕಗಳ ಕುರಿತು ಚರ್ಚೆ ನಡೆಸಲು ಸ್ಥಳೀಯ ವಿವಿಧ ಸಂಘಟನೆ ಹಾಗೂ ನಾಗರಿಕರು ಅ.24 ರಂದು ಅಪರಾಹ್ನ 3:00 ಗಂಟೆಗೆ ಸಂತೆಕಟ್ಟೆಯ ಮೌಂಟ್ ರೋಜರಿ ಚರ್ಚ್ ಮಿಲೇನಿಯಮ್ ಹಾಲ್ ನಲ್ಲಿ ತುರ್ತು ಸಭೆ ಕರೆಯಲಾಗಿದೆ.

ಈ ಬಗ್ಗೆ ಸಂತೆಕಟ್ಟೆ ನಾಗರಿಕರು ಮಾಹಿತಿ ನೀಡಿ, ಸಂತೆಕಟ್ಟೆ ಜಂಕ್ಷನ್ ನಲ್ಲಿ ದಿನಾಲು ಟ್ರಾಫಿಕ್ ಜಾಮ್. ಅವೈಜ್ಞಾನಿಕ ವ್ಯವಸ್ಥೆ, ಆಮೆಗತಿಯ ಅಭಿವೃದ್ಧಿ. ಶಾಲಾ ಮಕ್ಕಳು, ಮಹಿಳೆಯರು, ಹಿರಿಯರಂತೂ ರಸ್ತೆ ದಾಟಲು ಕಷ್ಟಪಡುವ ಪರಿಸ್ಥಿತಿ. ಈ ನಡುವೆ ಸೇತುವೆ ಎಂಬ ಹೊಸ ಯೋಜನೆ ಬರ್ತಾ ಇರೋದು ಸಂತೋಷದ ವಿಚಾರ. ಅದೂ ಕೂಡಾ ಸರಿಯಾಗಿ ಮೇಲು ಸೇತುವೆಯೋ, ಅಂಡರ್ ಪಾಸೋ, ಪಾದಾಚಾರಿಗಳಿಗೆ ಮಾತ್ರ ಮೇಲು ಸೇತುವೆಯೋ, ಅದೋ, ಇದೋ ಅಥವಾ ಮತ್ತೊಂದೊ ಒಟ್ಟಾರೆಯಾಗಿ ಸಂತೆಕಟ್ಟೆಯ ಆಸುಪಾಸಿನ‌ ನಾಗರಿಕರಿಗೆ ಇದು ಗೊಂದಲದ ಗೂಡಾಗಿದೆ.

ಸರಕಾರದ ಯೋಜನೆಗೆ ಸ್ವಾಗತಾರ್ಹ. ಅದರೆ, ಈ ಯೋಜನೆಯಿಂದ ಸ್ಥಳೀಯರಿಗೆ ನಾಗರಿಕರಿಗೂ ಪ್ರವಾಸಿಗರಿಗರಿಗೂ ಅನುಕೂಲ, ಟ್ರಾಫಿಕ್ ಜಾಮ್ ಸಮಸ್ಯೆಗೆ ಪರಿಹಾರ, ಸುಲಭ ಸಾಗುವಿಕೆ ಆಗಬೇಕೆ ಹೊರತು ಮುಂದಿನ ದಿನಗಳಲ್ಲಿ ಈಗ ಇರುವ ಸಮಸ್ಯೆಗಿಂತ ಹೆಚ್ಚಿನ ತೊಂದರೆಗಳು ಆಗಬಾರದು ಎಂಬ ಉದ್ದೇಶದಿಂದ ಸಕಾರಾತ್ಮಕ ದೃಷ್ಟಿಯಿಂದ ಯಾವುದೇ ಜಾತಿ ಮತ ಬೇದ ಬಾವ ಇಲ್ಲದೇ ಒಗ್ಗಟ್ಟಿನಿಂದ ಊರ ಹಿರಿಯರು ಮುಖಂಡರು ಸಮಾನ ಮನಸ್ಕರು ಶಾಲಾ ಕಾಲೇಜು ಮುಖ್ಯಸ್ಥರು ಧಾರ್ಮಿಕ ಮುಖಂಡರು ವಾಹನ ಸಂಘಟನಾ ಮುಖ್ಯಸ್ಥರು ಮಹಿಳಾ ಸಂಘ, ಯುವಕ ಸಂಘಟನೆ ಇನ್ನೂ ಹಲವಾರು ಆಸಕ್ತರು ಸೇರಿ ಸಂತೆಕಟ್ಟೆ ಜಂಕ್ಷನ್ ಸೇತುವೆ ನಿರ್ಮಾಣ ಮತ್ತು ಅಭಿವೃದ್ಧಿ ಬಗ್ಗೆ ಸಾಧಕ ಬಾಧಕ ತುರ್ತು ಸಭೆ ಕರೆಯಲಾಗಿದೆ.

ಈ ಸಂದರ್ಭದಲ್ಲಿ ಸಂತೆಕಟ್ಟೆ ಜಂಕ್ಷನ್ ಅಭಿವೃದ್ದಿ ಬಗ್ಗೆ ತಮ್ಮ ಅನಿಸಿಕೆಗಳನ್ನು ಮುಂದಾಲೋಚನೆಗಳನ್ನು ಅಥವಾ ಈಗಿರುವ ಸಮಸ್ಯೆಗಳನ್ನು ಸರಿಪಡಿಸುವ ಸುಲಭಪೋಯಗಳನ್ನು ತಿಲಿಸಲು ತಮ್ಮ ಸಲಹೆ ಸೂಚನೆ ವ್ಯಕ್ತಪಡಿಸಲು ಮುಕ್ತ ಅವಕಾಶ ಇರುತ್ತದೆ. ನಮಗಾಗುವ ಸಮಸ್ಯೆಗಳನ್ನು ಸರಕಾರದ ಮುಂದೆ ಇಟ್ಟು ಅಗತ್ಯವಿದ್ದಲ್ಲಿ ಸರಿಪಡಿಸಿ ಸರಕಾರದ ಈ ಅಭಿವೃದ್ಧಿ ಕಾರ್ಯದಲ್ಲಿ ಜೊತೆ ಕೊಟ್ಟು ಸರ್ವರಿಗೂ ಅನುಕೂಲಕರ ಸುಂದರ ಸಂತೆಕಟ್ಟೆ ಜಂಕ್ಷನ್ ನಿರ್ಮಾಣದಲ್ಲಿ ಕೈಜೋಡಿಸಬೇಕಾಗಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!