ಮುಂಬೈ: ರಸ್ತೆ ಅಪಘಾತದಲ್ಲಿ ಕೊಳಲಗಿರಿ ಮೂಲದ ವ್ಯಕ್ತಿ ಮೃತ್ಯು
ಮುಂಬೈ ಅ.22(ಉಡುಪಿ ಟೈಮ್ಸ್ ವರದಿ): ಮಹಾರಾಷ್ಟ್ರದ ಚೆಂಬೂರ್ ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಉಡುಪಿ ಕೊಳಲಗಿರಿ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ರೂಡಿ ರೋಶನ್ ಡಿ ಸೋಜಾ(33) ಮೃತಪಟ್ಟವರು. 7 ವರ್ಷಗಳಿಂದ ಮುಂಬೈನಲ್ಲಿದ್ದ ಇವರು ಮುಂಬೈ ನ ಶಿಪ್ ಯಾರ್ಡ್ ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರು ನಿನ್ನೆ ರಾತ್ರಿ 10 ಗಂಟೆ ವೇಳೆಗೆ ಕೆಲಸ ಮುಗಿಸಿ ಮನೆಗೆ ತನ್ನ ಬೈಕಿನಲ್ಲಿ ಬರುತ್ತಿದ್ದ ವೇಳೆ ಹಿಂಬದಿಯಿಂದ ಟ್ರಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲುಸಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಇಂದು ರಾತ್ರಿ ಇವರ ಮೃತದೇಹವನ್ನು ಮುಂಬೈನಿಂದ ಊರಿಗೆ ತರಲಾಗುತ್ತಿದೆ. ನಾಳೆ (ಅ.23) ಸಂಜೆ 4 ಗಂಟೆಗೆ ಕೊಳಲಗಿರಿಯ ಸೇಕ್ರೆಡ್ ಹಾರ್ಟ್ ಚರ್ಚ್ ನಲ್ಲಿ ಅಂತಿಮ ವಿಧಿವಿಧಾನಗಳು ನಡೆಯಲಿದೆ.