ತಿರುಪತಿ ತಿಮ್ಮಪ್ಪನ ವಿಶೇಷ ದರ್ಶನ: ಆನ್​​ಲೈನ್​​ ಟಿಕೆಟ್ ಬಿಡುಗಡೆ

ತಿರುಮಲ: ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ) ಆಡಳಿತ ಮಂಡಳಿಯೂ ತಿಮ್ಮಪ್ಪನ ವಿಶೇಷ ದರ್ಶನಕ್ಕಾಗಿ ಆನ್‌ಲೈನ್ ಮೂಲಕ ಕಾಯ್ದಿರಿಸಲು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ 300 ರೂ.ನ ಟಿಕೆಟ್​​ನನ್ನು ಬಿಡುಗಡೆ ಮಾಡಿದೆ.

ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ವಿಶೇಷ ದರ್ಶನ ಪಡೆಯಲು ಬಯಸುವವರು ಶುಕ್ರವಾರ ಬೆಳಗ್ಗೆ 9 ರಿಂದ ಟಿಕೆಟ್​​ ಕಾಯ್ದಿರಿಸಬಹುದಾಗಿದೆ. ಟಿಕೆಟ್‌ಗಳನ್ನು ವರ್ಚುಯಲ್‌ ಮಾದರಿಯಲ್ಲಿ ಬಿಡುಗಡೆ ಮಾಡುತ್ತಿರುವುದಾಗಿ ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.

ನವೆಂಬರ್ ತಿಂಗಳಿನಲ್ಲಿ ಸರ್ವ ದರ್ಶನದ ಟಿಕೆಟ್‌ಗಳನ್ನು ಶನಿವಾರ ಬೆಳಗ್ಗೆ 9 ರಿಂದ ಆನ್‌ಲೈನ್ ಬುಕಿಂಗ್‌ಗೆ ಅವಕಾಶ ನೀಡಲಾಗುವುದು ಎಂದು ದೇವಾಲಯ ಆಡಳಿತ ಮಂಡಳಿಯೂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ನಿತ್ಯ 12 ಸಾವಿರ ಟೋಕನ್‌ ಗಳು ಲಭ್ಯ ಇದೆ. ಹಾಗೆಯೇ ನವೆಂಬರ್ ಕೋಟಾದ ಸರ್ವ ದರ್ಶನ ಟಿಕೆಟ್​​​ ಸ್ಲಾಟ್ ಅನ್ನು ಭಾನುವಾರ ಬೆಳಗ್ಗೆ 9 ಗಂಟೆಗೆ ತೆರೆಯಲಿದ್ದು, ಭಕ್ತರು ಆನ್​​ಲೈನ್​ ಮೂಲಕ ಬುಕಿಂಗ್​ ಮಾಡಬಹುದು. 

ಕೊವಿಡ್​ 19 ನೆಗೆಟಿವ್​ ವರದಿ ತರುವುದು ಕಡ್ಡಾಯ ಎಂಬ ನಿಯಮವನ್ನು ಈಗಾಗಲೇ ಟಿಟಿಡಿ ಜಾರಿಗೊಳಿಸಿದೆ. ಈ ಮಧ್ಯೆ ದೇಗುಲಕ್ಕೆ ಭೇಟಿ ನೀಡಲು ಹೇರಿರುವ ಭಕ್ತರ ಸಂಖ್ಯಾ ಮಿತಿಯನ್ನು ಹೆಚ್ಚುಗೊಳಿಸಬೇಕು ಎಂಬ ಒತ್ತಡವೂ ಅದರ ಮೇಲೆ ಜಾಸ್ತಿಯಾಗುತ್ತಿದೆ. ಹಾಗಾಗಿ ಈ ಬಾರಿ ಕೋಟಾದಲ್ಲಿ ಜಾಸ್ತಿ ಟಿಕೆಟ್​ ಬಿಡುಗಡೆ ಮಾಡಬಹುದಾ ಎಂಬ ಕುತೂಹಲವೂ ಸಹಜವಾಗಿಯೇ ಎದ್ದಿದೆ.

ಸದ್ಯ ಒಂದು ದಿನಕ್ಕೆ 30,000ಕ್ಕಿಂತಲೂ ಕಡಿಮೆ ಭಕ್ತರು ತಿರುಮಲ ದೇವರ ದರ್ಶನಕ್ಕೆ ಆಗಮಿಸಬಹುದಾಗಿದೆ. ಕೊವಿಡ್​ 19 ಸಾಂಕ್ರಾಮಿಕಕ್ಕೂ ಪೂರ್ವ ಈ ದೇವಾಲಯದಲ್ಲಿ ಒಂದು ದಿನಕ್ಕೆ 79-80 ಸಾವಿರ ಯಾತ್ರಾರ್ಥಿಗಳಿಗೆ ಅವಕಾಶ ಇತ್ತು.

Leave a Reply

Your email address will not be published. Required fields are marked *

error: Content is protected !!