ಬೈಂದೂರು: ಸ್ಥಳ ಮಹಜರಿಗೆ ಹೋಗುತ್ತಿದ್ದವರಿಗೆ ತಲ್ವಾರ್ ದಾಳಿ

ಬೈಂದೂರು ಅ.22(ಉಡುಪಿ ಟೈಮ್ಸ್ ವರದಿ): ತಾಲೂಕಿನ ಶಿರೂರು ಗ್ರಾಮದ ನೀರ್ಗದ್ದೆಯಲ್ಲಿನ ಬಾರೊಂದರ ಮ್ಯಾನೇಜರ್ ಆಗಿರುವ ಅಶ್ವೀಜ್ ಶೆಟ್ಟಿ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಸ್ಥಳ ಮಹಜರು ತಯಾರಿಸಲು ಹೋಗುತ್ತಿದ್ದ ವೇಳೆ ಮತ್ತೆ ಆರೋಪಿಗಳು ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಈ ಬಗ್ಗೆ ಬಾರ್ ಆಂಡ್ ರೆಸ್ಟೋರೆಂಟ್ ನ ಮಾಲಕ ಅಣ್ಣಪ್ಪ ಶೆಟ್ಟಿ ಅವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಅ.20 ರಂದು ಅಶ್ವೀಜ್ ಶೆಟ್ಟಿ ಅವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಮಹಜರು ತಯಾರಿಸಲು ಬಾರ್ & ರೆಸ್ಟೊರೆಂಟ್ ಬಳಿ ಬರುವುದಾಗಿ ತಿಳಿಸಿದಂತೆ ದೂರುದಾರರು ಹಾಗೂ ಅವರ ಸ್ನೇಹಿತರಾದ ರವಿ ಶೆಟ್ಟಿ, ಪ್ರಶಾಂತ್ ಶೆಟ್ಟಿ ಹಾಗೂ ಅಕ್ಷಯ ಆಚಾರ್ಯ ಹೊರಟಿದ್ದರು. ಈ ನಡುವೆ ಶಿರೂರು ನಿರ್ಗದ್ದೆಯ ಹೊಟೇಲ್ ವೊಂದರ ಸಮೀಪ ತಲುಪಿದಾಗ ದೂರುದಾರರ ಕಾರಿನ ಹಿಂಬಂದಿಯಿಂದ ಬರುತ್ತಿದ್ದ ಕಾರಿನಲ್ಲಿದ್ದ ಸ್ನೇಹಿತರು ತಮ್ಮ ಕಾರನ್ನು ನಿಲ್ಲಿಸಿ ಇಳಿಯುತ್ತಿರುವುದನ್ನು ನೋಡಿದ ದೂರುದಾರರು ತಮ್ಮ ಕಾರನ್ನು ನಿಲ್ಲಿಸಿ ಇಳಿದು ನೋಡಿದಾಗ ರವಿ ಶೆಟ್ಟಿ, ಪ್ರಶಾಂತ್ ಶೆಟ್ಟಿ ಹಾಗೂ ಅಕ್ಷಯ ಆಚಾರ್ಯ ರವರು ಹೋಟೆಲ್ ವೊಂದರ ಬಳಿ ನಿಂತಿದ್ದ ಪರಿಚಯದ ಕಿರಣ್ ಪೂಜಾರಿ ಹಾಗೂ ಆಶೋಕ ದೇವಾಡಿಗ ಹಾಗೂ ಇತರ 3 ಜನರ ಬಳಿ ಹೋಗಿ ಮಾತನಾಡುತ್ತಿದ್ದರು. ಈ ವೇಳೆ ಆರೋಪಿತರು ರವಿ ಶೆಟ್ಟಿ, ಪ್ರಶಾಂತಗೆ ಏಕಾಏಕಿ ಅವಾಚ್ಯವಾಗಿ ಬೈದು, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಕಿರಣ್ ಪೂಜಾರಿ, ಅಶೋಕ ದೇವಾಡಿಗರವರು ತಲವಾರ್ ಮತ್ತು ಹಾರೆಯಿಂದ ರವಿ ಶೆಟ್ಟಿ, ಪ್ರಶಾಂತ ಶೆಟ್ಟಿ ಹಾಗೂ ಅಕ್ಷಯ ಆಚಾರ್ಯರವರಿಗೆ ಹಲ್ಲೆ ನಡೆಸಿದ್ದಾರೆ.

ಈ ಗಲಾಟೆಯನ್ನು ನೋಡಿ ಅಲ್ಲಿಯ ಸಾರ್ವಜನಿಕರು ಬರುವುದದನ್ನು ನೋಡಿದ ಆರೋಪಿಗಳು ಜೀವ ಬೆದರಿಕೆ ಹಾಕಿ ತಲವಾರಿನೊಂದಿಗೆ ಓಡಿ ಹೋಗಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Leave a Reply

Your email address will not be published. Required fields are marked *

error: Content is protected !!