“ಸ್ವಚ್ಚ ಶಿರ್ವ ನಮ್ಮ ಶಿರ್ವ” ಕಾರ್ಯಕ್ರಮದಡಿ ಕಸ ಎಸೆಯುವವರ ಬಗ್ಗೆ ನಿಗಾ

ಶಿರ್ವ ಅ.20 (ಉಡುಪಿ ಟೈಮ್ಸ್ ವರದಿ): ಶಿರ್ವ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಛತೆಯನ್ನು ಕಾಯ್ದುಕೊಳ್ಳುವ ಸಲುವಾಗಿ ಪಂಚಾಯತ್ ವತಿಯಿಂದ “ಸ್ವಚ್ಚ ಶಿರ್ವ ನಮ್ಮ ಶಿರ್ವ” ಕಾರ್ಯಕ್ರಮ ನಡೆಸಲಾಗುತ್ತಿದೆ.

ಈ ಕಾರ್ಯಕ್ರಮದಿಯಲ್ಲಿ ದಿನಾ ಬೆಳಿಗ್ಗೆ 7.30 ರಿಂದ 9 ಗಂಟೆವರೆಗೆ ಪಂಚಾಯತ್ ಅಧ್ಯಕ್ಷರೂ ಸೇರಿದಂತೆ ಸಿಬ್ಬಂದಿಯವರೊಂದಿಗೆ ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯುವವರ ಬಗ್ಗೆ ನಿಗಾ ಇಡಲಾಗುತ್ತಿದೆ.

ಈ ಕಾರ್ಯಕ್ರಮದ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ಕಸ,ತ್ಯಾಜ್ಯ ಎಸೆಯುವವರನ್ನು ಪತ್ತೆ ಹಚ್ಚಲಾಗುತ್ತಿದೆ. ಸಾರ್ವಜನಿಕವಾಗಿ ಉಗುಳುವುದು ಕಂಡುಬಂದಲ್ಲಿ ಅಂತವರಿಗೆ ಸಾಂಕ್ರಾಮಿಕ ರೋಗಗಳ ತಡೆ ಮತ್ತು ನಿಯಂತ್ರಣ ಕಾಯಿದೆ ಅಡಿ ದಂಡ ವಿಧಿಸ ಲಾಗುತ್ತಿದೆ. ಹಾಗೂ ಕಸ ಎಸೆಯುವವರನ್ನೂ ಹಿಡಿದು ದಂಡವಿಧಿಸಲಾಗುತ್ತಿದೆ. ಕಸದ ರಾಶಿ ಕಂಡು ಬಂದಲ್ಲಿ ಅದರ ವಿಲೇವಾರಿ ಮಾಡಲಾಗುತ್ತಿದೆ. ಆದ್ದರಿಂದ ಪಂಚಾಯತ್ ಸದಸ್ಯರು, ಸಾರ್ವಜನಿಕರು, ಗ್ರಾಮಸ್ಥರು, ಸಂಘ ಸಂಸ್ಥೆಗಳು ಈ ಕಾರ್ಯಕ್ರಮಕ್ಕೇ ಸಹಕರಿಸಬೇಕಾಗಿ ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ ಆರ್ ಪಾಟ್ಕರ್ ಅವರು ಮನವಿ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!