ಮಂಗಳೂರು ಕೇಸರಿ ಬಗ್ಗೆ ಆಕ್ಷೇಪರ್ಹ ಹೇಳಿಕೆ- ಐವನ್ ಡಿಸೋಜ ಮನೆಗೆ ಬಜರಂಗದಳ ಮುತ್ತಿಗೆ

ಮಂಗಳೂರು ಅ.20: ಕೇಸರಿ ಬಟ್ಟೆ ಬಗ್ಗೆ ಆಕ್ಷೇಪರ್ಹ ಹೇಳಿಕೆ ನೀಡಿದ್ದ ಹಿನ್ನಲೆಯಲ್ಲಿ ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ ಅವರ ಮನೆಗೆ ಬಜರಂಗದಳ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಇಂದು ನಡೆದಿದೆ.

ಇತ್ತೀಗೆ ಆಯುಧಪೂಜೆಯಲ್ಲಿ ವಿಜಯಪುರ ಗ್ರಾಮೀಣ ಹಾಗೂ ಕಾಪು ಠಾಣೆಯ ಪೊಲೀಸರು ಕೇಸರಿ ಉಡುಗೆ ಧರಿಸಿ ಪಾಲ್ಗೊಂಡಿದ್ದ ಬಳಿಕ ಕೇಸರಿ ವಸ್ತ್ರದ ಕುರಿತಾಗಿ ಆರಂಭಗೊಂಡಿರುವ ಪರ ವಿರೋಧ ಚರ್ಚೆಗಳು ಮುಂದುವರೆದಿದೆ. ಇದೀಗ ಇದೇ ವಿಚಾರವಾಗಿ ಕೇಸರಿ ಬಟ್ಟೆ ಬಗ್ಗೆ ಆಕ್ಷೇಪರ್ಹ ಹೇಳಿಕೆ ನೀಡಿದ್ದ ಹಿನ್ನಲೆಯಲ್ಲಿ ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ ಅವರ ಮನೆಗೆ ಬಜರಂಗದಳ ಕಾರ್ಯಕರ್ತರು ಮುತ್ತಿಗೆ ಹಾಕಲು ಮುಂದಾಗಿದ್ದಾರೆ.

ಈ ವೇಳೆ ಸ್ಥಳಕ್ಕಾಗಮಿಸಿದ ಮಂಗಳೂರು ದಕ್ಷಿಣ ಪೊಲೀಸರು ಮುತ್ತಿಗೆ ಯತ್ನವನ್ನು ವಿಫಲಗೊಳಿಸಿದರು. ಹಾಗೂ ಬಜರಂಗದಳದ ಕೆಲವು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!