ಕಲ್ಲಿನ ಬದಲು ಕಿಡ್ನಿಯನ್ನೇ ಹೊರ ತೆಗೆದ ವೈದ್ಯರು! ರೋಗಿ ಸಾವು

ಅಹಮದಾಬಾದ್: ಗುಜರಾತ್ ನ ಅಹಮದಾಬಾದ್ ನ ಗ್ರಾಹಕ ನ್ಯಾಯಾಲಯವು ಆಸ್ಪತ್ರೆಯೊಂದಕ್ಕೆ 11.23 ಲಕ್ಷ ರೂ.ಗಳನ್ನು ಮೃತ ರೋಗಿಯ ಕುಟುಂಬಸ್ಥರಿಗೆ ಪರಿಹಾರವಾಗಿ ನೀಡುವಂತೆ ಸೂಚಿಸಿದೆ.

ಗುಜರಾತ್ ನ ಮಹಿಸಾಗರ್ ಜಿಲ್ಲೆಯ ಬಾಲಸಿನೋರ್ ನಲ್ಲಿರುವ ಕೆಎಂಜಿ ಜನರಲ್​ ಆಸ್ಪತ್ರೆಯ ವೈದ್ಯರ ನಿರ್ಲಕ್ಷದಿಂದ ರೋಗಿಯೊಬ್ಬ ಪ್ರಾಣವನ್ನು ಕಳೆದುಕೊಂಡಿದ್ದಾನೆ. 

ಕೆಎಂಜಿ ಜನರಲ್​ ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ ಕಳೆದ ನಾಲ್ಕು ತಿಂಗಳಿನಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ವ್ಯಕ್ತಿಯ ಕಿಡ್ನಿಯಲ್ಲಿ ಸ್ಟೋನ್​ ಇದ್ದು, ಅದನ್ನು ತೆಗೆಯಲು ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಲು ಮುಂದಾಗಿದ್ದಾರೆ. ಆದ್ರೆ ಶಸ್ತ್ರ ಚಿಕಿತ್ಸೆ ವೇಳೆ ಕಿಡ್ನಿಯಲ್ಲಿನ ಕಲ್ಲು ತೆಗೆಯುವ ಬದಲು ಕಿಡ್ನಿಯನ್ನೇ ತೆಗೆದಿದ್ದಾರೆ. ಇದರಿಂದ ರೋಗಿ ಮೃತಪಟ್ಟಿದ್ದಾನೆ.

ಡಾ. ಶಿವುಭಾಯಿ ಪಟೇಲ್​​ ನೇತೃತ್ವದ ತಂಡ ಅನೇಕ ವೈದ್ಯಕೀಯ ಪರೀಕ್ಷೆಗಳ ನಂತರ ಮೂತ್ರಪಿಂಡದಲ್ಲಿ 14ಎಂಎಂ ಕಲ್ಲು ಇರುವುದನ್ನ ಪತ್ತೆ ಮಾಡಿತ್ತು. ಸೆಪ್ಟೆಂಬರ್​​​ 3ರಂದು ಆತನಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಈ ವೇಳೆ ವೈದ್ಯರು ಕಿಡ್ನಿಯನ್ನೇ ತೆಗೆದಿದ್ದಾರೆ. ಬಳಿಕ ರೋಗಿಯ ಪ್ರಾಣವನ್ನು ಉಳಿಸಲು ಮೂತ್ರಪಿಂಡ ತೆಗೆಯುವುದು ಅನಿವಾರ್ಯವಾಗಿತ್ತು ಎಂದು ಹೇಳಿಕೊಂಡಿದ್ದಾರೆ.

ಮೃತರ ಸಂಬಂಧಿಯ ಮನವಿಯನ್ನು ಆಲಿಸಿದ ಗುಜರಾತ್ ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗವು, ಮೃತನ ಸಂಬಂಧಿಕರಿಗೆ 11.23 ಲಕ್ಷ ಪರಿಹಾರ ನೀಡುವಂತೆ ಕೆಎಂಜಿ ಜನರಲ್​ ಆಸ್ಪತ್ರೆ ಆದೇಶಿಸಿದೆ.

Leave a Reply

Your email address will not be published. Required fields are marked *

error: Content is protected !!