ಮಾನಸಿಕರು ನೈತಿಕ ಪೊಲೀಸ್‌ಗಿರಿ ಮಾಡುತ್ತಾರೆ – ಗೃಹಸಚಿವ ಅರಗ ಜ್ಞಾನೇಂದ್ರ

ಬೆಂಗಳೂರು: ಬೆಳಗಾವಿಯಲ್ಲಿ ನಡೆದ ನೈತಿಕ ಪೊಲೀಸ್‌ಗಿರಿಯಂತಹ ಘಟನೆಯನ್ನು ಖಂಡಿಸಿರುವ ಗೃಹಸಚಿವ ಅರಗ ಜ್ಞಾನೇಂದ್ರ,ಮಾನಸಿಕ ಅಸ್ವಸ್ಥತೆಯಿರುವವರು ಇಂತಹ ಘಟನೆಗೆ ಕೈ ಹಾಕುತ್ತಾರೆ ಎಂದಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಆರಗ ಜ್ಞಾನೇಂದ್ರ,ಈ ರೀತಿಯ ಘಟನೆಗಳನ್ನು ನಾವು ಸಹಿಸುವುದಿಲ್ಲ. ಬೆಳಗಾವಿ ಘಟನೆಗಳ ಬಗ್ಗೆ ಪೊಲೀಸರು ತನಿಖೆ ಮಾಡ್ತಿದ್ದಾರೆ. ಅಲ್ಲದೆ, ನಿನ್ನೆ ಓರ್ವನನ್ನು ಬಂಧಿಸಿದ್ದಾರೆ. ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಯಾವುದೇ ಧರ್ಮದವರಾಗಿದ್ದರೂ ಅವರಿಗೆ  ಶಿಕ್ಷೆ ಆಗುತ್ತದೆ. ಕೆಲವರು ಮಾನಸಿಕವಾಗಿ ಆ‌‌ ರೀತಿ ಇರುತ್ತಾರೆ. ಪೊಲೀಸರು ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಂಡಾಗ ಇಂತಹ ಘಟನೆಗಳು ಕಡಿಮೆ ಆಗುತ್ತವೆ ಎಂದರು.

ಪೊಲೀಸರು ಅನುಮತಿ ನೀಡುವಾಗ ಕಿರಿಕಿರಿ ಮಾಡಬೇಡದೇ ಅನುಮತಿ ನೀಡುವಾಗ ಅಗತ್ಯ ಕ್ರಮಗಳ ಬಗ್ಗೆ ತಿಳಿಸಿ. ಹಣದ ವ್ಯವಹಾರ ಇಲ್ಲಿ ನಡೆಯೋದು ಬೇಡ. ಎಲ್ಲವನ್ನು ನಿಭಾಯಿಸಿಕೊಂಡು ಕೆಲಸ ಮಾಡಬೇಕು ಎಂದು ಪೊಲೀಸರಿಗೆ ಗೃಹಸಚಿವರು ಸಲಹೆ ನೀಡಿದರು.

ಸಿನಿಮಾ ಹಿಂದಿನ ಕಷ್ಟ ಗೊತ್ತಿರಲಿಲ್ಲ
ಬೆಂಗಳೂರು: ತಮಗೆ ಸಿನಿಮಾ ನೋಡಿ ಮನರಂಜನೆ ಖುಷಿಪಟ್ಟಿದ್ದು ಗೊತ್ತೇ ವಿನಃ ಸಿನಿಮಾ ನಿರ್ಮಾಣದ ಹಿಂದಿನ‌ ಕಷ್ಟ ಗೊತ್ತಿರಲಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ. ಪೈರಸಿ ಹಾವಳಿಗೆ ಸಿನಿಮಾ ಉದ್ಯಮ ತತ್ತರಿಸುತ್ತಿದ್ದು,ಪೈರಸಿ ಹಾವಳಿ ತಡೆಗೆ ಗೃಹ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗುವುದಾಗಿ‌ ಭರವಸೆ ನೀಡಿದೆ. 

ಗೃಹ ಸಚಿವ ಆರಗ ಜ್ಞಾನೇಂದ್ರ ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಚೇರಿಗೆ ಭೇಟಿ ನೀಡಿ, ಮಂಡಳಿಯ ಪದಾಧಿಕಾರಿಗಳ ಜತೆ, ಕನ್ನಡ ಸಿನೆಮಾ ಇಂಡಸ್ಟ್ರಿ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರೋಪಾಯಗಳ ಬಗ್ಗೆ ಚರ್ಚೆ ನಡೆಸಿದರು.

1 thought on “ಮಾನಸಿಕರು ನೈತಿಕ ಪೊಲೀಸ್‌ಗಿರಿ ಮಾಡುತ್ತಾರೆ – ಗೃಹಸಚಿವ ಅರಗ ಜ್ಞಾನೇಂದ್ರ

  1. ಗೃಹ ಸಚಿವರಿಂದ ನೈತಿಕ ಪೊಲೀಸ್ಗಿರಿಯನ್ನು ಖಂಡಿಸಿ ಹೇಳಿಕೆ
    ನೀಡಿ ಆಯಿತು, ಆದರೆ ಮಾಡಿದವರ ಮೇಲೆ ಏನು ಕಾನೂನು
    ರೀತಿಯ ಕ್ರಮ ಕೈಗೊಳ್ಳುವ ಕಾನೂನು ನಮ್ಮಲ್ಲಿ ಇದೆ ಎಂಬುದನ್ನೂ
    ಹೇಳಿದ್ದರೆ ಚೆನ್ನಾಗಿ ಇತ್ತು ಎಂಬುದು ನನ್ನ ಅಭಿಪ್ರಾಯ ಸಾರ್.

Leave a Reply

Your email address will not be published. Required fields are marked *

error: Content is protected !!