ನಿಯಮ ಉಲ್ಲಂಘಿಸಿದ ಬ್ಯಾಂಕ್’ಗೆ 1 ಕೋಟಿ ರೂ. ದಂಡ ವಿಧಿಸಿದ ರಿಸರ್ವ್ ಬ್ಯಾಂಕ್
ಹೊಸದಿಲ್ಲಿ ಅ.19: ನಿಯಮಗಳನ್ನು ಉಲ್ಲಂಘಿಸಿದಕ್ಕಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೂ.1 ಕೋಟಿ ದಂಡ ಹೇರಿದೆ.
ಎಸ್ಬಿಐಗೆ ಸೇರಿದ ಗ್ರಾಹಕ ಖಾತೆಯೊಂದನ್ನು ಪರಾಮರ್ಶಿಸಿದ ನಂತರ ಕೆಲವೊಂದು ನಿಯಮಗಳ ಪಾಲನೆಯಾಗಿಲ್ಲ ಎಂದು ತಿಳಿದುಕೊಂಡ ರಿಸರ್ವ್ ಬ್ಯಾಂಕ್, ಶೋಕಾಸ್ ನೋಟಿಸ್ ಜಾರಿಗೊಳಿಸಿ ಈ ಉಲ್ಲಂಘನೆಗೆ ದಂಡವೇಕೆ ವಿಧಿಸಬಾರದು ಎಂದು ಪ್ರಶ್ನಿಸಿತ್ತು. ವಾಣಿಜ್ಯ ಬ್ಯಾಂಕುಗಳು ಮತ್ತು ಆಯ್ದ ಹಣಕಾಸುಸಂಸ್ಥೆಗಳು ವರದಿ ಮಾಡಿದ ವಂಚನೆಗಳನ್ನು ವರ್ಗೀಕರಣ ಗೊಳಿಸುವುದಕ್ಕೆ ಸಂಬಂಧಿಸದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈ ದಂಡ ಹೇರಲಾಗಿದೆ. ಇನ್ನು ಈ ಹಿಂದೆ ಸೈಬರ್ ಸೆಕ್ಯುರಿಟಿ ಘಟನೆಯನ್ನು ವರದಿ ಮಾಡಲು ವಿಫಲವಾಗಿದ್ದಕ್ಕೆ ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಮೇಲೆಯೂ ರಿಸರ್ವ್ ಬ್ಯಾಂಕ್ ಈಗಾಗಲೇ ರೂ 1.95 ಕೋಟಿ ದಂಡ ಹೇರಿತ್ತು.