ಅನಾಥ ಮಕ್ಕಳ ಆಶ್ರಮಗಳಲ್ಲಿ ಹುಟ್ಟುಹಬ್ಬ ಆಚರಣೆಗೆ ಮಕ್ಕಳ ರಕ್ಷಣಾ ನಿರ್ದೇಶನಾಲಯ ಬ್ರೇಕ್!

ಬೆಂಗಳೂರು ಅ.19: ಅನಾಥ ಮಕ್ಕಳ ಆಶ್ರಮಗಳಲ್ಲಿ ಸೆಲೆಬ್ರೆಟಿ ಹಾಗೂ ರಾಜಕಾರಣಿಗಳ ಅದ್ಧೂರಿ ಹುಟ್ಟುಹಬ್ಬ ಆಚರಣೆಗೆ ಮಕ್ಕಳ ರಕ್ಷಣಾ ನಿರ್ದೇಶನಾಲಯ ಬ್ರೇಕ್ ಹಾಕಿದೆ. ಅಲ್ಲದೆ ಇನ್ನು ಮುಂದೆ ಈ ರೀತಿಯ ಆಚರಣೆ ಕಂಡು ಬಂದರೆ ಶಿಕ್ಷಾರ್ಹ ಅಪರಾಧವಾಗಿ ಘೋಷಣೆ ಮಾಡಲಾಗುತ್ತದೆ ಎಚ್ಚರಿಕೆ ನೀಡಿದೆ.

ಸೆಲೆಬ್ರೆಟಿಗಳು, ರಾಜಕಾರಣಿಗಳು ಅನಾಥ ಆಶ್ರಮಗಳಿಗೆ ತೆರಳಿ ಹುಟ್ಟುಹಬ್ಬ ಆಚರಿಸುವ ಹೊಸ ಪದ್ದತಿ ಇತ್ತೀಚಿನ ವರುಷಗಳಲ್ಲಿ ಆರಂಭವಾಗಿತ್ತು. ಇದರಿಂದ ಮಕ್ಕಳ ಮನಸ್ಸಿನ ಮೇಲಾಗುವ ಪರಿಣಾಮವನ್ನು ಗಂಭೀರವಾಗಿ ಪರಿಗಣಿಸಿರುವ ಮಕ್ಕಳ ರಕ್ಷಣಾ ನಿರ್ದೇಶನಾಲಯ” ಸೆಲೆಬ್ರಿಟಿಗಳು, ರಾಜಕಾರಣಿಗಳು ಮಕ್ಕಳ ಅನಾಥಾಲಯಗಳಲ್ಲಿ ನಡೆಸುವ ಅದ್ಧೂರಿ ಹುಟ್ಟುಹಬ್ಬದ ಆಚರಣೆಯಿಂದ ಅನಾಥ ಮಕ್ಕಳ ಮನಸಿನಲ್ಲಿ ಅಸಮಾನತೆ ಮೂಡುತ್ತದೆ. ಮಕ್ಕಳ ಮನಸಿನಲ್ಲಿ ತಾವು ಕೀಳೆಂಬ ಭಾವನೆ ಬರಬಹುದು. ತಾರತಮ್ಯ ಭಾವನೆ ಹೆಚ್ಚಾಗಿ ಖಿನ್ನತೆಗೆ ಕಾರಣವಾಗಬಹುದು.ಹೀಗಾಗಿ ಆಶ್ರಮಗಳಲ್ಲಿ ಅದ್ಧೂರಿ ಬರ್ತ್‍ಡೇ ಆಚರಣೆಗೆ ನಿಬರ್ಂಧ ಹೇರಲಾಗಿದೆ. ಇನ್ನು ಮುಂದೆ ಹೊರಗಿನಿಂದ ಬಂದು ಹುಟ್ಟುಹಬ್ಬವನ್ನು ಆಚರಿಸುವಂತಿಲ್ಲ. ಅದ್ಧೂರಿ ಹುಟ್ಟುಹಬ್ಬ ಆಚರಿಸಿದರೆ ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಹೇಳಿದೆ.

ಈ ಮೂಲಕ ಇನ್ನು ಮುಂದೆ ಹೊರಗಿನವರು ಯಾರೂಕೂಡಾ ಮಕ್ಕಳ ಅನಾಥಾಲಯಗಳಲ್ಲಿ, ಅನಾಥ ಮಕ್ಕಳು, ಬಾಲಕಾರ್ಮಿಕ ಪದ್ಧತಿಯಿಂದ ರಕ್ಷಿಸಲ್ಪಟ್ಟ ಮಕ್ಕಳು, ಭಿಕ್ಷಾಟನೆಯಿಂದ ಹೊರಬಂದ ಮಕ್ಕಳು, ಬಾಲ್ಯವಿವಾಹಕ್ಕೆ ಒಳಗಾಗಿ ರಕ್ಷಿಸಲ್ಪಟ್ಟ ಮಕ್ಕಳು, ಮಾನಸಿಕ ಅಸ್ವಸ್ಥ ಮಕ್ಕಳು ಸೇರಿ ಅಬಲ ಮಕ್ಕಳ ಜೊತೆಗೆ ಹುಟ್ಟುಹಬ್ಬ ಆಚರಿಸುವಂತಿಲ್ಲ ಎಂದು ಮಕ್ಕಳ ರಕ್ಷಣಾ ನಿರ್ದೇಶನಾಲಯ ಹೇಳಿದೆ.

Leave a Reply

Your email address will not be published. Required fields are marked *

error: Content is protected !!