ಉಡುಪಿಯ 3ನೇ, ರಾಜ್ಯದ 16ನೇ ಗೃಹೋಪಕರಣಗಳ ಮಳಿಗೆ “ಹರ್ಷ” ಶುಭಾರಂಭ

ಉಡುಪಿ ಅ.18 (ಉಡುಪಿ ಟೈಮ್ಸ್ ವರದಿ): “ಹರ್ಷ” ಸಮೂಹ ಸಂಸ್ಥೆಯ ಅತೀ ದೊಡ್ಡ ಗೃಹೋಪಕರಣಗಳ ನೂತನ ಮಳಿಗೆ ಇಂದು ಉದ್ಘಾಟನೆಗೊಂಡಿತು.

ನಗರದ ಸಿಟಿಬಸ್ ನಿಲ್ದಾಣದ ಬಳಿಯಲ್ಲಿರುವ ಶ್ರೀದತ್ತಕೃಪಾ ಕಟ್ಟಡದಲ್ಲಿರುವ ಈ ನೂತನ ಮಳಿಗೆಯನ್ನು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಹರ್ಷ ಸಮೂಹ ಸಂಸ್ಥೆಯ ಕಳೆದ 34 ವರ್ಷಗಳಿಂದ ಗ್ರಾಹಕರ ನಂಬಿಕೆ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದೆ.

ಈ ಸಂಸ್ಥೆಯು ಉಡುಪಿಯ ಆಸ್ತಿಯಾಗಿ ಬೆಳೆದಿದೆ. ಈ ಸಂಸ್ಥೆಯು ಉಡುಪಿಯ ಕಾರ್ಯಗಳಲ್ಲಿಯೂ ತನ್ನನ್ನು ತಾನು ತೊಡಗಿಸಿ ಕೊಂಡಿದೆ. ಪ್ರತೀ ವರ್ಷ ಪರ್ಯಾಯ ಉತ್ಸವದಲ್ಲಿ ಸಂಗೀತಗಾರರನ್ನು ಆಹ್ವಾನಿಸುವ ಮೂಲಕ ಸಂಗೀತವನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದೆ ಹಾಗೂ ಜಿಲ್ಲೆಯ ಹಬ್ಬವನ್ನು ತಮ್ಮ ಹಬ್ಬವೆಂಬಂತೆ ಸಂಭ್ರಮದಿಂದ ಆಚರಿಸುತ್ತಿದೆ ಎಂದರು.

ಈ ವೇಳೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಮಾತನಾಡಿ, ಬೋಳ ಪೂಜಾರಿ ವರು ಅತ್ಯಂತ ಶ್ರೇಷ್ಠವಾದ ಗುಣ ನಡತೆಗಳನ್ನು ತಮ್ಮ ಮಕ್ಕಳಿಗೆ ಧಾರೆ ಎರೆದಿದ್ದಾರೆ. ಅವರ ಹಾಕಿಕೊಟ್ಟಿರುವ ಭದ್ರವಾದ ಮೌಲ್ಯಗಳ ಅಡಿಪಾಯವೇ ಹರ್ಷದ ಯಶಸ್ಸಿಗೆ ಕಾರಣವಾಗಿದೆ. ಇವರ ಸಂಸ್ಥೆ ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಶಾಖೆಗಳನ್ನು ಆರಂಭಿಸುವ ಮೂಲಕ ದೇಶದಾದ್ಯಂತ ಹೆಸರುವಾಸಿಯಾಗುವಂತಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶಾಸಕ ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ನಗರ ಸಭಾಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ಕೆನರಾ ಬ್ಯಾಂಕ್‍ನ ಜನರಲ್ ಮ್ಯಾನೇಜರ್ ರಾಮ್ ನಾಯಕ್, ಉಡುಪಿ ನಗರ ಸಭೆಯ ಮಾಜಿ ಅಧ್ಯಕ್ಷರಾದ ಎಂ ಸೋಮಶೇಖರ್ ಭಟ್, ಮಣಿಪಾಲ ಟೆಕ್ನಾಲಜಿ ಲಿಮಿಟೆಡ್ ನ ಕಾರ್ಯಾ ಪ್ರವರ್ಥಕ ಗೌತಮ್ ಪೈ, ಇಂಡಿಯನ್ ಐಡಲ್ ಖ್ಯಾತಿಯ ನಿಹಾಲ್ ತಾವ್ರೋ ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಸಾವಿರಾರು ಗ್ರಾಹಕರನ್ನು ಒಳಗೊಂಡಿರುವ ಹರ್ಷ ಸಮೂಹ ಸಂಸ್ಥೆಯ ಈ ನೂತನ ಶಾಖೆ 16 ನೇ ಮಳಿಗೆಯಾಗಿದೆ.
ಉತ್ತಮ ಗುಣಮಟ್ಟದ ಸೇವೆಯಿಂದ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವ ಹರ್ಷ ಸಮೂಹ ಸಂಸ್ಥೆ ಉಡುಪಿ ಯಲ್ಲಿ ಮೂರನೇ ಮಳಿಗೆಯನ್ನು ಆರಂಭಿಸುತ್ತಿದೆ.

40,000 ಸಾವಿರ ಚದರಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಈ ನೂತನ ಮಳಿಗೆಯು 4 ಅಂತಸ್ತನ್ನು ಹೊಂದಿದ್ದು, ಸಂಪೂರ್ಣ ಹವಾನಿಯಂತ್ರಿತವಾಗಿದೆ. ಈ ನೂತನ ಮಳಿಗೆಯಲ್ಲಿ ಉತ್ಕೃಷ್ಟ ಗುಣಮಟ್ಟದ ಉಪಕರಣಗಳೊಂದಿಗೆ ಅಡುಗೆ ಸಾಧನಗಳು, ಹೊಚ್ಚಹೊಸ ಡಿಜಿಟಲ್ ತಂತ್ರಜ್ಞಾನದ  ವಸ್ತು ವೈವಿಧ್ಯಗಳು, ಫರ್ನಿಚರ್ ಗಳು ಹಾಗೂ ಫಿಟ್ನೆಸ್ ಸಂಬಂಧಿತ ಉಪಕರಣಗಳು ಒಂದೇ ಸೂರಿನಡಿಯಲ್ಲಿ ಗ್ರಾಹಕರಿಗೆ ಸಿಗಲಿದೆ.

ಈ ನೂತನ ಮಳಿಗೆಯ ಮೊದಲ ಮಹಡಿಯಲ್ಲಿರುವ ಇನ್ನೋವೇಶನ್ ಝೋನ್ ನಲ್ಲಿ ಆಡಿಯೋ ಸಿಸ್ಟಮ್, ಹೋಂ ಥಿಯೇಟರ್, ಸ್ಮಾರ್ಟ್ ಫೋನ್, ಕಂಪ್ಯೂಟರ್, ಲ್ಯಾಪ್ಟಾಪ್, ಪ್ರಿಂಟರ್ಸ್,  ಕ್ಯಾಮೆರಾ, ಎಲ್ ಇಡಿ ಟಿವಿ, ಸ್ಮಾರ್ಟ್ ವಾಚ್ ಹಾಗೂ ಅವುಗಳಿಗೆ ಸಂಬಂಧಿಸಿದ ಇತರ ಸಲಕರಣೆಗಳು (ಆಕ್ಸೆಸರೀಸ್) ಸೇರಿದಂತೆ ಎಲ್ಲಾ ತರಹದ ಡಿಜಿಟಲ್, ಎಲೆಕ್ಟ್ರಾನಿಕ್  ಉಪಕರಣಗಳು ಲಭ್ಯವಿದೆ.

ಎರಡನೇ ಮಹಡಿಯಲ್ಲಿರುವ ಕನ್ವೇನಿಯನ್ಸ್ ಝೋನ್ ನಲ್ಲಿ ಕುಕ್ಕಿಂಗ್ ಸೆಟ್, ಪ್ರೆಶರ್ ಕುಕ್ಕರ್, ಮಿಕ್ಸಿ, ಗ್ರೈಂಡರ್ ಹಾಗೂ ಫ್ಯಾನ್, ಕೂಲರ್, ಐರನ್ ಬಾಕ್ಸ್, ಕೆಟಲ್, ವಾಕ್ಯೂಮ್ ಕ್ಲೀನರ್ ಸೇರಿದಂತೆ ಎಲ್ಲಾ ಅಡುಗೆ ಉಪಕರಣಗಳು ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳು ಸಿಗಲಿವೆ.

ಮೂರನೇ ಮಹಡಿಯಲ್ಲಿ  ಫ್ರೆಶ್ ನೆಸ್ ಝೋನ್ ನಲ್ಲಿ  ಏರ್ ಕಂಡೀಷನರ್, ರೆಫ್ರಿಜಿರೇಟರ್, ವಾಷಿಂಗ್ ಮಷೀನ್, ಮೈಕ್ರೋವೇವ್, ಓವನ್,  ಡೀಪ್ ಫ್ರೀಜರ್, ಹೆಲ್ತ್ ಮತ್ತು ಫಿಟ್ನೆಸ್ ಇಕ್ಯೂಕ್ಮೆಂಟ್ ಗಳು ಇರಲಿವೆ.

ನಾಲ್ಕನೇ ಮಹಡಿಯಲ್ಲಿ ಲೈಫ್ ಸ್ಟೈಲ್  ಝೋನ್ ನಲ್ಲಿ ವಾರ್ಡ್ರೋಬ್, ಸೋಫಾ ಸೆಟ್, ಕಾರ್ಟ್, ಅಲ್ಮೇರಾ, ಡೈನಿಂಗ್ ಸೆಟ್, ಬೆಡ್ರೂಮ್ ಸೆಟ್, ಮ್ಯಾಟ್ರಿಕ್ಸ್ ಸೇರಿದಂತೆ ಮನೆ ಕಚೇರಿಗಳಿಗೆ ಬೇಕಾಗುವ ಎಲ್ಲಾ ತರಹದ ಫರ್ನಿಚರ್ ಗಳು ಲಭ್ಯವಿದೆ.
ವಿಶಾಲವಾದ ಹರ್ಷದ ನೂತನ ಮಳಿಗೆಯು ರಾಷ್ಟ್ರೀಯ ಗುಣ ಮಟ್ಟದ ಡಿಸ್ಪ್ಲೇ ಯೊಂದಿಗೆ ಆಧುನಿಕ ಶಾಪಿಂಗ್ ತಾಣವಾಗಿ ಗ್ರಾಹಕರಿಗೆ ಮತ್ತಷ್ಟು ಹೆಚ್ಚಿನ ಶಾಪಿಂಗ್ ಅನುಭವವನ್ನು ನೀಡಲಿದೆ.

ಹರ್ಷ ಒಡೆತನ ಹೊಂದಿರುವ ಪ್ರಕಾಶ್ ರೀಟೇಲ್ಸ್ ಪ್ರೈ.ಲಿ ಉಡುಪಿಯ ಅಂಬಲಪಾಡಿಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದ್ದು, 1987ರ ಮಾರ್ಚ್ 9ರಂದು ಉಡುಪಿಯ ಕೆ.ಎಂ ಮಾರ್ಗದಲ್ಲಿ ಮೊದಲ ಮಳಿಗೆಯನ್ನು ಆರಂಭಿಸಿತ್ತು. ನಂತರದ ವರ್ಷಗಳಲ್ಲಿ ಮಂಗಳೂರು, ಪುತ್ತೂರು ,ಕುಂದಾಪುರ, ಬ್ರಹ್ಮವರ ,ಸುರತ್ಕಲ್, ಮಲೆನಾಡಿನ ಶಿವಮೊಗ್ಗ, ಉತ್ತರ ಕರ್ನಾಟಕದ ಹುಬ್ಬಳ್ಳಿ ,ಧಾರವಾಡ, ಬೆಳಗಾವಿ, ಗುಲ್ಬರ್ಗ, ಬೆಂಗಳೂರಿನಲ್ಲಿ ಮಳಿಗೆಗಳನ್ನು ವಿಸ್ತರಿಸಿತು.

Leave a Reply

Your email address will not be published. Required fields are marked *

error: Content is protected !!