ಅ.25ರಿಂದ 1ರಿಂದ 5ನೇ ತರಗತಿ ಶಾಲೆಗಳ ಆರಂಭ- ಮಾರ್ಗಸೂಚಿ ಪ್ರಕಟ

ಉಡುಪಿ ಅ.18(ಉಡುಪಿ ಟೈಮ್ಸ್ ವರದಿ): ರಾಜ್ಯಾದ್ಯಂತ ಅ.25 ರಿಂದ 1ರಿಂದ 5 ನೇ ತರಗತಿಗಳ ಆರಂಬಿಸಲು ಸರಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟಲು ಸರಕಾರ ಹೊರಡಿಸಿರುವ  ಕೋವಿಡ್ ಮಾರ್ಗ ಸೂಚಿಯಲ್ಲಿ ಕೆಲವೊಂದು ನಿಯಮಗಳನ್ನು ಸೇರ್ಪಡೆ ಗೊಳಿಸಿ ಪರಿಷ್ಕೃತ  ಮಾರ್ಗ ಸೂಚಿಯನ್ನು ಪ್ರಕಟಿಸಲಾಗಿದೆ.

ಈ ಪರಿಷ್ಕೃತ ಮಾರ್ಗಸೂಚಿ ಯನ್ನು ಜಿಲ್ಲೆಗೆ ಅನ್ವಯವಾಗುವಂತೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಅವರು ಆದೇಶ ಹೊರಡಿಸಿದ್ದಾರೆ. ಕೋವಿಡ್ ಸೂಕ್ತ ನಡವಳಿಕೆ ಮತ್ತು ಪ್ರಾಥಮಿಕ ಮತ್ತು ಪ್ರೌಢಶಾಲೆ  ಶಿಕ್ಷಣ ಇಲಾಖೆಯಿಂದ ನೀಡಲಾದ ಎಸ್‌ಒಪಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿಗೊಳಪಟ್ಟು ಅ.25 ರಿಂದ 1 ರಿಂದ 5 ನೇ ತರಗತಿಯ ವರೆಗೆ ಶಾಲೆಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.

ಅದರಂತೆ ದೈಹಿಕ ತರಗತಿಗಳಿಗೆ ಪೋಷಕರ ಒಪ್ಪಿಗೆ ಪತ್ರ ಕಡ್ಡಾಯಗೊಳಿಸುವುದು. ಶಾಲೆಯ ಪ್ರವೇಶ ದ್ವಾರದಲ್ಲಿ  ಕೋವಿಡ್ 19 ರೋಗಲಕ್ಷಣಗಳ  ಬಗ್ಗೆ ಸ್ಕ್ರೀನಿಂಗ್ ಮಾಡುವುದು. ತರಗತಿ ಕೊಠಡಿಯ  50% ಸಾಮರ್ಥ್ಯಕ್ಕೆ ಅನುಗುಣವಾಗಿ ತರಗತಿಗಳನ್ನು ನಡೆಸುವುದು. ಹ್ಯಾಂಡ್ ಸ್ಯಾನಿಟೈಸರ್ ಗಳನ್ನು  ಒದಗಿಸುವುದು, ಪ್ರಾಯೋಗಿಕವಾಗಿ ಸಾಧ್ಯವಾದಷ್ಟು ಒಂದು ಮೀಟರ್ ದೈಹಿಕ ಅಂತರವನ್ನು ಕಾಪಾಡುವುದು, ವಿಶೇಷವಾಗಿ ಶಾಲಾ ಪ್ರವೇಶ ಮತ್ತು ನಿರ್ಗಮನ ಪ್ರದೇಶದಲ್ಲಿ ಒಟ್ಟುಗೂಡುವುದನ್ನು ನಿರ್ಬಂಧಿಸಲಾಗಿದೆ.

1 % ಸೋಡಿಯಂ ಹೈಪೋಕ್ಲೋರೈಟ್ ದ್ರಾವಣವನ್ನು ಬಳಸಿಕೊಂಡು ತರಗತಿ ಕೊಠಡಿಗಳು ಮತ್ತು ವಿಶ್ರಾಂತಿ ಕೊಠಡಿಗಳನ್ನು ಪ್ರತಿದಿನ ಸೋಂಕು ರಹಿತಗೊಳಿಸುವುದು. 1 ರಿಂದ 5 ನೇ ತರಗತಿಯಲ್ಲಿ ಕೋವಿಡ್ 19 ಲಸಿಕೆಯ ಎರಡು ಡೋಸ್ ಲಸಿಕೆ ಪಡೆದ ಶಿಕ್ಷಕರು ಮತ್ತು ಸಿಬ್ಬಂದಿಗೆ ಮಾತ್ರ ಅವಕಾಶ ನೀಡುವುದು. 50 ವರ್ಷಕ್ಕಿಂತ ಮೇಲ್ಪಟ್ಟ ಶಿಕ್ಷಕರು ಫೇಸ್‌ ಶೀಲ್ಡ್‌ ಗಳನ್ನು  ಹೆಚ್ಚುವರಿ ಬಳಕೆ ಮಾಡುವಂತೆ ಸೂಚನೆ ನೀಡಲಾಗಿದೆ. ಇದರೊಂದಿಗೆ  ಈಜುಕೊಳಗಳನ್ನು ಈ ಕೆಳಗಿನ ಷರತ್ತುಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ ಅದರಂತೆ ಪ್ರತಿ ಬ್ಯಾಚ್‌ನ  ಶೇಕಡ 50 ಸಾಮರ್ಥ್ಯಕ್ಕೆ ಅನುಗುಣವಾಗಿ ಅನುಮತಿ ನೀಡುವುದು. ಹಾಗೂಪ್ರವೇಶದ್ವಾರದಲ್ಲಿ ಅನುಮತಿಸಬಹುದಾದ ಸಂಖ್ಯೆಯನ್ನು ಪ್ರದರ್ಶಿಸುವುದು .

ಪ್ರವೇಶದ ಸಮಯದಲ್ಲಿ ಎಲ್ಲರನ್ನು ಜ್ವರ ಮತ್ತು ಉಸಿರಾಟದ ಲಕ್ಷಣಗಳ ಬಗ್ಗೆ ತಪಾಸಣೆ ನಡೆಸಿ ರೋಗ ಲಕ್ಷಣರಹಿತರಿಗೆ ಮಾತ್ರ ಅವಕಾಶ ಕಲ್ಪಿಸುವುದು. ಎರಡು ಡೋಸ್ ಲಸಿಕೆ ಪ್ರಮಾಣ ಪತ್ರಗಳನ್ನು ಹೊಂದಿರುವವರಿಗೆ ಮಾತ್ರ ಅನುಮತಿ ನೀಡುವುದು. ಪ್ರತಿ ಬ್ಯಾಚ್‌ನ ನಂತರ ಈಜುಗಾರರು ಉಪಯೋಗಿಸಿರುವ ವಿಶ್ರಾಂತಿ ಕೊಠಡಿಗಳು, ನಡೆದಾಡುವ ಜಾಗಗಳು (ವಾಕ್‌ವೇಗಳು) ಮತ್ತು ಇತರ ಸಾಮಾನ್ಯ ಪ್ರದೇಶಗಳನ್ನು ಶೇಕಡ 1 ಸೋಡಿಯಂ ಹೈಪೋಕ್ಲೋರೈಟ್ ದ್ರಾವಣವನ್ನು ಬಳಸಿ ಸ್ವಚ್ವಗೊಳಿಸುವಂತೆ ಸೂಚಿಸಲಾಗಿದೆ. 

Leave a Reply

Your email address will not be published. Required fields are marked *

error: Content is protected !!