ಹೆಬ್ರಿ: ರಾಜಕೀಯ ಮುಖಂಡ ಆಯೋಜಿಸಿದ ಕೋಳಿ ಅಂಕಕ್ಕೆ ದಾಳಿ, ಹತ್ತು ಜನರ ಬಂಧನ
ಹೆಬ್ರಿ: ಸ್ಥಳೀಯ ಸಂಘಟನೆಯ ಮುಖಂಡ, ರಾಜಕೀಯಾ ನಾಯಕನೊರ್ವನ ಮುತುರ್ವಜಿಯಲ್ಲಿ ನಡೆದ ಕೋಳಿ ಅಂಕ್ಕೆ ದಾಳಿ ಮಾಡಿದ ಹೆಬ್ರಿ ಪೊಲೀಸರು ಹತ್ತು ಜನರನ್ನು ಬಂಧಿಸಿದ್ದಾರೆ.
ಈ ಬಗ್ಗೆ ನಿನ್ನೆ “ಉಡುಪಿ ಟೈಮ್ಸ್” ‘144 ಸೆಕ್ಷನ್ (3) ನಡುವೇ ಭರ್ಜರಿ ಕೋಳಿ ಅಂಕ’ ಎಂಬ ಶಿರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಹೆಬ್ರಿ ಠಾಣಾಧಿಕಾರಿ ಸುಮಾ. ಬಿ ಅವರು ತಕ್ಷಣ ನಾಡ್ಪಾಲು ಗ್ರಾಮದಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ಮಾಡಿ, ಸ್ಥಳೀಯ ರಾಜಕೀಯಾ ಮುಖಂಡ ಸುಧಾಕರ, ವಿದ್ಯಾನಂದ ಪೂಜಾರಿ .ಸುದರ್ಶನ್, ಪ್ರಕಾಶ್, ಸುರೇಶ್ ರವಿ, ರಮೇಶ್, ಶುಭಕರ, ರಾಘುವೇಂದ್ರ ,ಮಹೇಶ್ ಪೂಜಾರಿ ಇವರನ್ನು ಬಂಧಿಸಿದ್ದಾರೆ.
ಆಪಾದಿತರುಗಳು ಕೋವಿಡ್-19 ಕಾಯ್ದೆಯ ಲಾಕ್‌ಡೌನ್ ಆದೇಶವನ್ನು ಉಲ್ಲಂಘಿಸಿ ಆರೋಪಿತರುಗಳು ಕೋಳಿ ಅಂಕವನ್ನು ನಡೆಸುತ್ತಿದ್ದರು. ಬಂಧಿತರಲ್ಲಿ ಕೋಳಿ ಅಂಕಕ್ಕೆ ಬಳಸಿದ 4 ಹುಂಜ, ಕೋಳಿ ಅಂಕಕ್ಕೆ ಬಳಸಿದ ನಗದು 10,150 ರೂಪಾಯಿ ಹಾಗೂ ಕೋಳಿಗಳಿಗೆ ಕಟ್ಟಿದ ನಾಲ್ಕೂ ಬಾಳ್ ಮತ್ತು ಆರೋಪಿತರ ನಾಲ್ಕು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಾಡ್ಪಾಲು ಗ್ರಾಮದ ಅಜ್ಜೊಳ್ಳಿಯಲ್ಲಿ ಕೋಳಿ ಅಂಕವನ್ನು ಮಲೆಕುಡಿಯ ಘಟಕ ಆಯೋಜನೆ ಮಾಡಿತ್ತು ಎಂಬ ಆರೋಪ ಸತ್ಯಕ್ಕೆ ದೂರವಾದ ಮಾತು, ಎಂದು ಮಲೆಕುಡಿಯ ಸಂಘ ಹೆಬ್ರಿ ತಾಲೂಕು ಸಮಿತಿಯ ಅಧ್ಯಕ್ಷ ಉದಯ್ ಗೌಡ ಮುದ್ರಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Strict action should be taken against the people who are doing mischievous activities during this period of Covid 19, breaking the rules of Section 144 (3).Sudheer Kanchan, MA. , Udupi District. S
Strict action should be taken against the people who are doing mischievous activities during this period of Covid 19, breaking the rules of Section 144 (3).Sudheer Kanchan, MA. , Udupi District.