ದುರ್ಗಾ ದೌಡ್ ತಲವಾರು ಪ್ರದರ್ಶನ: ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಬಂಧಿಸಲು ಪಿಎಫ್’ಐ ಒತ್ತಾಯ

ಉಡುಪಿ: ವಿಜಯದಶಮಿಯಂದು ಹಿಂದೂ ಜಾಗರಣ ವೇದಿಕೆ ಆಯೋಜಿಸಿದ್ದ ದುರ್ಗಾ ದೌಡ್ ಕಾರ್ಯಕ್ರಮದ ಅಂಗವಾಗಿ ನಡೆದ ಮೆರವಣಿಗೆಯುದ್ದಕ್ಕೂ ತಲವಾರು ಮತ್ತು ಇತರ ಮಾರಕ ಆಯುಧಗಳನ್ನು ಪ್ರದರ್ಶಿಸಿ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಿಸಿದ ಕ್ರಮವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಉಡುಪಿ ಜಿಲ್ಲಾ ಸಮಿತಿ ಖಂಡಿಸುತ್ತದೆ. 

ಇತ್ತೀಚಿನ ದಿನಗಳಲ್ಲಿ ಸಂಘ ಪರಿವಾರ ಸಂಘಟನೆಗಳು ಜಿಲ್ಲೆಯಲ್ಲಿ ಶಾಂತಿ ಮತ್ತು ಕೋಮು ಸಾಮರಸ್ಯವನ್ನು ಕದಡುವ ನಿರಂತರ ಪ್ರಯತ್ನವನ್ನು ಮಾಡುತ್ತಿದೆ. ಕಳೆದ ತಿಂಗಳು ಕಾರ್ಕಳದಲ್ಲಿ ನಡೆದ  ಕ್ರೈಸ್ತ ಪ್ರಾರ್ಥನಾಲಯದ ಮೇಲಿನ ದಾಳಿ, ಗಂಗೊಳ್ಳಿಯಲ್ಲಿ ಪ್ರತಿಭಟನೆಯ ಹೆಸರಿನಲ್ಲಿ ಒಂದು ಕೋಮಿನ ವಿರುದ್ಧ ಕೂಗಿದ ಅವಹೇಳನಕಾರಿ ಪೋಷಣೆಗಳು, ಸಂಘಪರಿವಾರ ನಾಯಕರ ಉದ್ರೇಕಕಾರಿ ಭಾಷಣಗಳು ಹಾಗೂ ಹೇಳಿಕೆಗಳು ಮತ್ತು ಆಯುಧಪೂಜೆಯ ಹೆಸರಿನಲ್ಲಿ ಅಕ್ರಮ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿ ಪೂಜೆ  ಮುಂತಾದ ಕೃತ್ಯಗಳ ಮೂಲಕ ಸಮಾಜದಲ್ಲಿ ಅಶಾಂತಿಯನ್ನು ನಿರ್ಮಿಸುವ ನಿರಂತರ ಪ್ರಯತ್ನವನ್ನು ಸಂಘಪರಿವಾರ ಮಾಡಿದೆ.

ಇದರ ಮುಂದುವರಿದ ಭಾಗವಾಗಿ ಮೊನ್ನೆ ಉಡುಪಿಯಲ್ಲಿ ನಡೆದ ದುರ್ಗಾ ದೌಡ್ ಮೆರವಣಿಗೆಯಲ್ಲಿ ಪೊಲೀಸರ, ಶಾಸಕರ ಮತ್ತು ಸಚಿವರ ಸಮ್ಮುಖದಲ್ಲಿಸಾರ್ವಜನಿಕವಾಗಿ ತಲವಾರು ಹಾಗೂ ಮಾರಕಾಯುಧಗಳನ್ನು ಪ್ರದರ್ಶಿಸಲಾಗಿದೆ.  ಈ ಎಲ್ಲಾ ಸಂದರ್ಭದಲ್ಲೂ ಪೊಲೀಸ್ ಇಲಾಖೆಯ ಗಾಢ ಮೌನ ಅನಾಹುತಕ್ಕೆ ದಾರಿಯುಂಟುಮಾಡಲಿದೆ. ಪೊಲೀಸ್ ಇಲಾಖೆ ಕೂಡಲೇ ಎ‍ಚ್ಚೆತ್ತುಕೊಂಡು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ದುರ್ಗಾ ದೌಡ್ ಕಾರ್ಯಕ್ರಮದ ಆಯೋಜಕರ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿ ಬಂಧಿಸಬೇಕು. ಇದಕ್ಕೆ ವಿಫಲವಾದರೆ ಜಿಲ್ಲಾದ್ಯಂತ ತೀವ್ರ ಹೋರಾಟ ನಡೆಸಲಾಗುವುದೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಯಾಜ್ ಅಹ್ಮದ್ ಎಚ್ಚರಿಸಿದ್ದಾರೆ.

1 thought on “ದುರ್ಗಾ ದೌಡ್ ತಲವಾರು ಪ್ರದರ್ಶನ: ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಬಂಧಿಸಲು ಪಿಎಫ್’ಐ ಒತ್ತಾಯ

  1. Popular front of India needs to be banned. It is Jehadi recruiting organisation, funded by foreign Mullah countries. In Bangalore riots, PFI had wrecked Havoc , allegedly because there was a tweet insulting Mohd.
    Paigambar.Actually, it was the other way round. Mullahs started the provocation by using vulgar words to our goddess.In response to it, when a Hindu boy tweeted against Mohammad, the original tweet was deleted and Mullahs went on rampage in Bangalore. During that,covid restrictions, Mullahs could easily form a crowd of 5000 people, which shows the attack was pre-planned

Leave a Reply

Your email address will not be published. Required fields are marked *

error: Content is protected !!