ತ್ರಿಶೂಲದ ಬದಲಿಗೆ ಯುವಕರ ಕೈಗೆ ಪುಸ್ತಕ, ಪೆನ್ನು ಕೊಡಿ: ಅಮೃತ್ ಶೆಣೈ

ಉಡುಪಿ: ಯುವ ಜನತೆಯಲ್ಲಿ ‌ಕಾನೂನಿನ ಅರಿವು ಮೂಡಿಸುತ್ತಾ, ಅವರನ್ನು ಸುಶಿಕ್ಷಿತರನ್ನಾಗಿ ಮಾಡಿ ಭವಿಷ್ಯದ ಜವಾಬ್ದಾರಿಯುತ ಪ್ರಜೆಗಳನ್ನಾಗಿ ರೂಪಿಸುವುದನ್ನು ಬಿಟ್ಟು ಅವರ ಕೈಯಲ್ಲಿ ಆಯುಧಗಳನ್ನು ‌ನೀಡಿ‌ ಧರ್ಮ ರಕ್ಷಣೆಯ‌ ನೆಪದಲ್ಲಿ‌ ಅವರು‌ ಕಾನೂನನ್ನು‌ಕೈಗೆತ್ತಿಕೊಳ್ಳುವ ಹಾಗೆ‌ಮಾಡಿ ಅವರ ಭವಿಷ್ಯಕ್ಕೆ ಕೊಳ್ಳಿ ಇಡುತ್ತಾ ಇರುವುದು ಅತ್ಯಂತ ಖೇದನೀಯ ಎಂದು ಉಡುಪಿ ಸಹಬಾಳ್ವೆ ತಂಡದ ಅಧ್ಯಕ್ಷ ಅಮೃತ್ ಶೆಣೈ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದಯೆಯೇ‌ ಧರ್ಮದ‌ ಮೂಲ, ಯುವ ಜನರು ಧರ್ಮದ ಪಾಲನೆ ಮಾಡಿದರೆ ಧರ್ಮವನ್ನು ರಕ್ಷಿಸಿದ ಹಾಗೆ ಆಗುತ್ತದೆ. ಕರಾವಳಿಯಲ್ಲಿ ಶಾಂತಿ, ಅಹಿಂಸೆ ಹಾಗೂ‌‌ ಪ್ರೀತಿಯನ್ನು ಎತ್ತಿ ಹಿಡಿಯಲು, ತನ್ಮೂಲಕ‌ ಸಹೋದರತೆ ಹಾಗೂ‌ ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ಸಹಬಾಳ್ವೆ ತಂಡದ ವತಿಯಿಂದ ಸಾಮರಸ್ಯ ನಡಿಗೆಯನ್ನು ಮುಂದಿನ‌ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು, ಈ ಕಾರ್ಯಕ್ರಮಕ್ಕೆ ಎಲ್ಲಾ ಸಮಾನ ಮನಸ್ಕರ ಬೆಂಬಲ ಬೇಕು ಎಂದೂ ಅವರು ತಿಳಿಸಿದ್ದಾರೆ.

4 thoughts on “ತ್ರಿಶೂಲದ ಬದಲಿಗೆ ಯುವಕರ ಕೈಗೆ ಪುಸ್ತಕ, ಪೆನ್ನು ಕೊಡಿ: ಅಮೃತ್ ಶೆಣೈ

  1. ಲಾಡೆನ್ ಪುಸ್ತಕ ಓಡಿದವ ಕೇರಳ ISIs ಸೇರಿದವರು ಡಿಗ್ರೀ ಮಾಡಿದವರು ನಿಮ್ಮ ಪ್ರಕಾರ ಹಿಂದೂಗಳು ಪುಸ್ತಕ ಅವರು ಬಾಂಬ್ ಹಿಡಿಬೇಕು.ನಿಮ್ಮಂತವರಿಂದಲೆ ಹಿಂದೂಗಳು ಪಾಕಿಸ್ತಾನ ಮತ್ತೆ ಬಾಂಗ್ಲಾದೇಶದ ಕಲಿಯಾಗಿರುವುದು ಇದೆ ತರ ನೀವು ಇದ್ದರೆ ನಮ್ಮ ಪರಿಸ್ಥಿತಿ ಅದೇ ತರ ಆಗುವುದರಲ್ಲಿ ಸಂಶಯ ಇಲ್ಲ

  2. ಪುಸ್ತಕ ಹಿಡಿದು ಜ್ಞಾನಿ ಆದ ಬಳಿಕವೇ ತಾವು‌ ತಮ್ಮ ಪಕ್ಷ ದಿಂದ ಹೊರಗೆಬರುವಂತಾಗಿರಬಹುದು ಅಲ್ಲವೋ.

  3. Mr Shenoy, very well said. This is the right thing to be done. Unfortunately these fanatics are filling venom in the minds of young people and destroying their future in the name of religion. It’s very dangerous

  4. ಹಿಂದೆ ಇದೇ ಪಿಎಫ್ಐ ಸಂಘಟನೆ ಯ ಕೆಲವರು ಗೋವುಗಳನ್ನು ಹಿಂಸಿಸಿದಾಗ, ಹಿಂದೂಗಳ ಶ್ರದ್ಧಾಕೇಂದ್ರಗಳಲ್ಲಿ ಮಲಮೂತ್ರ ವಿಸರ್ಜಿಸಿ, ದೈವಸ್ಥಾನದ ಕಾಣಿಕೆಹುಂಡಿಗಳಲ್ಲಿ ಕಾಂಡೋಮ್ ಹಾಕಿ ವಿಕೃತಿ ಮೆರೆದಾಗ ನಿಮ್ಮ ಅನಿಸಿಕೆ ಏನಿತ್ತು?

Leave a Reply

Your email address will not be published. Required fields are marked *

error: Content is protected !!