ಕಾರ್ಕಳ: ಇಬ್ಬರು ಮಕ್ಕಳೊಂದಿಗೆ ಮಹಿಳೆ ನಾಪತ್ತೆ

ಉಡುಪಿ ಅ.16(ಉಡುಪಿ ಟೈಮ್ಸ್ ವರದಿ): ಅಜ್ಜಿ ಮನೆಗೆ ಹೋಗಿ ಬರುವುದಾಗಿ ಹೇಳಿ ಇಬ್ಬರು ಮಕ್ಕಳೊಂದಿಗೆ ಹೋದ ತಾಯಿ  ಮಕ್ಕಳೊಂದಿಗೆ ನಾಪತ್ತೆಯಾಗಿರುವ ಘಟನೆ ಕಾರ್ಕಳದ ಬೋಳ ಪದವಿನಲ್ಲಿ ನಡೆದಿದೆ.

ಸವಿತಾ ಪೂಜಾರಿ(36), ವಿಷ್ಣು(10), ಅಶ್ಮಿತಾ ನಾಪತ್ತೆಯಾದವರು. ಇಬ್ಬರು ಮಕ್ಕಳೊಂದಿಗೆ ಬೋಳ ಪದವು ಎಂಬಲ್ಲಿ ವಾಸವಾಗಿದ್ದ ಸವಿತಾ  ಅವರು ಅ.12 ರಂದು ತನ್ನ ಮಕ್ಕಳೊಂದಿಗೆ ಮುಂಡ್ಕೂರಿನ ನಾನಿಲ್ತಾರಿನಲ್ಲಿ ಇರುವ ಅಜ್ಜಿ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಈ ವರೆಗೂ ಮನೆಗೆ ವಾಪಾಸು ಬಂದಿರುವುದಿಲ್ಲ. ಈ ನಡುವೆ ಒಂದು ವಾರದ ಹಿಂದೆ ತನ್ನ ತಮ್ಮ ಸತೀಶನಿಗೆ ಕರೆ ಮಾಡಿ ತಾನು ಉಮೇಶ ಎಂಬವನನ್ನು ಮದುವೆಯಾಗುತ್ತೇನೆ ಎಂದು ಹೇಳಿದ್ದು, ಅದರಂತೆ ಸವಿತಾ ಅವರು ಇಬ್ಬರು ಮಕ್ಕಳೊಂದಿಗೆ ಉಮೇಶನ ಜೊತೆಗೆ ಹೋಗಿರಬಹುದು ಎಂದು ಸಂಶಯ ಇರುವುದಾಗಿ ಸವಿತಾರ ತಾಯಿ ನೀಡಿರುವ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!