ಆಯುಧ ಪೂಜೆಯಲ್ಲಿ ತ್ರಿಶೂಲ ಪೂಜೆ- ಕಾನೂನಿನ ವಿರುದ್ಧವಾಗಿದ್ದರೆ ಕ್ರಮ: ಎನ್.ಶಶಿಕುಮಾರ್

ಮಂಗಳೂರು ಅ.15: ಆಯುಧ ಪೂಜೆ ಸಂದರ್ಭ ಬಜರಂಗ ದಳ ಕಾರ್ಯಕರ್ತರು ತ್ರಿಶೂಲಕ್ಕೆ ಪೂಜೆ ನಡೆಸಿರುವ ವಿಚಾರಕ್ಕೆ ಸಂಬಂಧಿಸಿ ಪರಿಶೀಲನೆ ನಡೆಸಲು ಪೊಲೀಸರಿಗೆ ಸೂಚನೆ ನೀಡಿರುವುದಾಗಿ ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ಮಂಗಳೂರು ಸೇರಿದಂತೆ ಇತರ ಕಡೆಗಳಲ್ಲಿ ವಿಹಿಂಪ, ಬಜರಂಗ ದಳದ ವತಿಯಿಂದ ನಡೆದ ಆಯುಧ ಪೂಜೆ ಸಂದರ್ಭದಲ್ಲಿ ‘ತ್ರಿಶೂಲ ದೀಕ್ಷೆ’ ಮಾಡಿರುವುದು ಗೊತ್ತಾಗಿದೆ. ಈ ವಿಚಾರಕ್ಕೆ ಸಂಬಂಧಿಸಿ ತ್ರಿಶೂಲಕ್ಕೆ ಪೂಜೆಸಲ್ಲಿಸಿ ಪ್ರದರ್ಶಿಸಿರುವ ಫೋಟೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಪರಿಶೀಲಿಸಿದಾಗ ಪ್ರತೀ ವರ್ಷ ಇದನ್ನು ಆಚರಣೆ ರೀತಿಯಲ್ಲಿ ಮಾಡಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಇದರಲ್ಲಿ ಕಾನೂನಾತ್ಮಕವಾಗಿ ತಪ್ಪಿದೆಯೇ ಎಂದು ಪರಿಶೀಲಿಸಲು ಪೊಲೀಸರಿಗೆ ಸೂಚನೆ ನೀಡಿಲಾಗಿದೆ.

ಮಂಗಳೂರು, ಉಡುಪಿ, ಪುತ್ತೂರು ಸೇರಿದಂತೆ ವಿವಿಧೆಡೆ ಆಯುಧ ಪೂಜೆ ಸಂದರ್ಭದಲ್ಲಿ ಬಜರಂಗ ದಳ ಕಾರ್ಯಕರ್ತರು ತ್ರಿಶೂಲಗಳಿಗೆ ಪೂಜೆ ಸಲ್ಲಿಸಿ ಕೈಯಲ್ಲಿ ಹಿಡಿದಿದ್ದರು. ತ್ರಿಶೂಲ ದೀಕ್ಷೆಯು ಕಾನೂನಿನ ವಿರುದ್ಧವಾಗಿದ್ದರೆ ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!