ಒಳ್ಳೆ ದಿನಗಳು ಬರುತ್ತವೆ ಎಂದು ಜನಸಾಮಾನ್ಯರ ಲೂಟಿ ಮಾಡುತ್ತಿದೆ: ಯೋಗೀಶ್

ಉಡುಪಿ: ಪೆಟ್ರೋಲ್, ಡೀಸೆಲ್ ಮೇಲಿನ ಬೆಲೆಯನ್ನು ನಿರಂತರ ಏರಿಕೆ ಮಾಡುವ ಮೂಲಕ ಜನರ ಮೇಲೆ ಕೇಂದ್ರ ಸರಕಾರವು ಅತಿಯಾದ ಹೊರೆಯನ್ನು ಹೇರುವಂತೆ ಮಾಡಿ ಜನಸಾಮಾನ್ಯರನ್ನು ಲೂಟಿ ಮಾಡುತ್ತಿದೆ.


ಪೆಟ್ರೋಲ್ ಡೀಸೆಲ್ ದರ ಏರಿಕೆ ಮಾಡುತ್ತಿರುವುದು ಖಂಡನೀಯ. ಒಳ್ಳೆ ದಿನಗಳು ಬರುತ್ತವೆ ಎನ್ನುತ್ತಿದ್ದ ಸರಕಾರ ದೇಶಾದ್ಯಂತ ಕೋವಿಡ್-19 ನಿ೦ದ ಜನ ತತ್ತರಿಸುವ ಈ ಸಂದರ್ಭ ತೈಲ  ಬೆಲೆಯನ್ನು ಏರಿಸುವುದು ಸರ್ವತಾ ಸಲ್ಲದು.


2013ರಲ್ಲಿ ಪೆಟ್ರೋಲ್ ,ಡೀಸೆಲ್ ಬೆಲೆ ಕಡಿಮೆ ಇದ್ದು 2014ರಿ೦ದ  ಅತಿ ಹೆಚ್ಚಳವೂ ಆಗಿದ್ದು, ಅಂತಾರಾಷ್ಟ್ರೀಯ ಕಚ್ಚಾ ತೈಲದ  ಬೆಲೆ ಕಡಿಮೆ ಇದ್ದು ಕೇಂದ್ರ ಮತ್ತು ರಾಜ್ಯ ಸರಕಾರವು ಪೆಟ್ರೋಲ್ ಮತ್ತು  ಡೀಸಲ್‌  ದರವನ್ನು ಕೂಡಲೇ  ಇಳಿಕೆ ಮಾಡಬೇಕೆಂದು ಉಡುಪಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿಯವರು ಸರ್ಕಾರವನ್ನು ಒತ್ತಾಯಿಸಿರುತ್ತಾರೆ. 

Leave a Reply

Your email address will not be published. Required fields are marked *

error: Content is protected !!