ಸಾಲಗಾರರಿಗೆ ಮತ್ತೆ ಸಿಹಿ ಸುದ್ದಿ ನೀಡಿದ ಆರ್‌ಬಿಐ!
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ರೆಪೊ ದರ (ಆರ್‌ಬಿಐ ಬ್ಯಾಂಕ್‌ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರ) ಪ್ರಕಟಿಸಿದ್ದು, ಹಿಂದಿನ ದರದಲ್ಲಿ 40 ಅಂಶಗಳನ್ನು ಕಡಿತಗೊಳಿಸುವ ಮೂಲಕ ಶೇ 4 ನಿಗದಿ ಪಡಿಸಿದೆ.
ರಿವರ್ಸ್ ರೆಪೊ ದರ ಸಹ ಕಡಿತಗೊಳಿಸಲಾಗಿದ್ದು, ಶೇ 3.75ರಿಂದ ಶೇ 3.35 ನಿಗದಿ ಪಡಿಸಿರುವುದಾಗಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.
ಕೋವಿಡ್–19 ಬಿಕ್ಕಟ್ಟಿನಿಂದಾಗಿ ಮಾರ್ಚ್‌ನಲ್ಲಿ ದೀರ್ಘಾವಧಿ ಸಾಲಗಳ ಮಾಸಿಕ ಕಂತು ಪಾವತಿಯನ್ನು 3 ತಿಂಗಳ ವರೆಗೂ ಮುಂದೂಡುವ ಅವಕಾಶ ಪ್ರಕಟಿಸಿದ್ದ ಆರ್‌ಬಿಐ, ಮತ್ತೆ ಮೂರು ತಿಂಗಳ ವರೆಗೂ ಆ ವ್ಯವಸ್ಥೆ ಮುಂದುವರಿಸಿದೆ. ಎಲ್ಲ ಬ್ಯಾಂಕ್‌ಗಳು ಇಎಂಐ ಪಾವತಿಗೆ 3 ತಿಂಗಳ ಅವಕಾಶ ನೀಡಲು ಆರ್‌ಬಿಐ ಅನುಮತಿ ನೀಡಿದೆ.