ಸಾಯಿ ಸಾಂತ್ವನ ಮಂದಿರ: ಕೋವಿಡ್-19 ಜನಜಾಗೃತಿಗಾಗಿ ಪ್ರಚಾರ ವಾಹನಕ್ಕೆ ಚಾಲನೆ
ಶಂಕರಪುರ: ಸಾಯಿ ಸಾಂತ್ವನ ಮಂದಿರದ ಧರ್ಮದರ್ಶಿ ಗುರೂಜಿ ಸಾಯಿಈಶ್ವರ್ ಇವರ ಮುತುವರ್ಜಿಯಿಂದ ದ್ವಾರಕಾಮಾಹಿ ಸಾಯಿ ಬಾಬಾ ಮಂದಿರದಿಂದ ಕೋವಿಡ್ 19 ಬಗ್ಗೆ ಜನಜಾಗೃತಿಗಾಗಿ ಪ್ರಚಾರ ವಾಹನಕ್ಕೆ ಗುರುವಾರ ಕಾಪು ಶಾಸಕ ಲಾಲಾಜಿ ಮೆಂಡನ್ ಚಾಲನೆ ನೀಡಿದರು.
ನಂತರ ಮಾತಾನಾಡಿದ ಅವರು, ಜಿಲ್ಲೆಯಲ್ಲಿ ವಿವಿಧ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವ ಗುರೂಜಿ ಸಾಯಿ ಈಶ್ವರ್ ಅವರ ಕಾರ್ಯ ಅತ್ಯಂತ ಶ್ಲಾಘನೀಯವಾಗಿದ್ದು, ಕೊರೋನಾದಂತಹ ಈ ಸಂಧರ್ಭದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರಚಾರ ವಾಹನ ಚಾಲನೆ ಮಾಡಿರುವುದು ಅತ್ಯಂತ ಅಭಿನಂದನೀಯ ಎಂದರು.
ಕೊರೋನಾದಂತಹ ಲಾಕ್-ಡೌನ್ ಸಮಯದಲ್ಲಿ ಮಂದಿರದ ವತಿಯಿಂದ ಊಟೋಪಚಾರ ಹಾಗೂ ಕಿಟ್ ವಿತರಿಸುವ ಕಾರ್ಯ ಮಾಡಿದ್ದರು.
ಇದು ದ್ವಾರಕಾಮಾಹಿ ಶ್ರೀ ಸಾಯಿ ಬಾಬಾ ಮಂದಿರದ ವತಿಯಿಂದ ನಡೆಯುವ ರಾಜ್ಯದ ಪ್ರಥಮ ಕೋವಿಡ್ 19 ಜಾಗೃತಿ ಪ್ರಚಾರ ವಾಹನವಾಗಿದೆ. ಕನ್ನಡ ಮತ್ತು ತುಳು ಭಾಷೆಯಲ್ಲಿ ಜಾಗೃತಿ ಮೂಡಿಸುವ ಸಂದೇಶ ಅಳವಡಿಸಲಾಗಿದೆ.
ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯರಾದ ಗೀತಾಂಜಲಿ ಸುವರ್ಣ, ಗ್ರಾಮ.ಪಂ.ಮಾಜಿ ಸದಸ್ಯ ಅಶೋಕ್ ರಾವ್, ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚ ಅಧ್ಯಕ್ಷೆ ವೀಣಾ ಶೆಟ್ಟಿ, ಸಾಯಿ ಮಂದಿರದ ಟ್ರಸ್ಟಿ ವಿಶ್ವನಾಥ ಸುವರ್ಣ, ಸಾಮಾಜಿಕ ಕಾಯ೯ಕತ೯ ರಾಘವೇಂದ್ರ ಪ್ರಭು ಕವಾ೯ಲು ಮುಂತಾದವರು ಉಪಸ್ಥಿತರಿದ್ದರು.