ಉಡುಪಿ: ಎಸ್ಬಿಐ ಬ್ಯಾಂಕ್ ವತಿಯಿಂದ 4 ವೆಂಟಿಲೇಟರ್ ಹಸ್ತಾಂತರ
ಉಡುಪಿ: ಭಾರತೀಯ ಸ್ಟೇಟ್ ಬ್ಯಾಂಕ್ ವತಿಯಿಂದ 4 ವೆಂಟಿಲೇಟರ್ ಗಳನ್ನು ಪ್ರಾದೇಶಿಕ ವ್ಯವಸ್ಥಾಪಕರಾದ ತರುಣ್ ಫಾಯದೆ ಅವರು ಜಿಲ್ಲಾಧಿಕಾರಿ ಜಗದೀಶ್ ಯವರಿಗೆ ಗುರುವಾರ ಹಸ್ತಾಂತರಿಸಲಾಯಿತು.
ಭಾರತೀಯ ಸ್ಟೇಟ್ ಬ್ಯಾಂಕ್ 30 ಕೋಟಿ ರೂಪಾಯಿಗಳ ಕೋವಿಡ್ ಪರಿಹಾರ ನಿಧಿಯನ್ನು ಸ್ಥಾಪಿಸಿದೆ. ಶೃಂಗ ಮಟ್ಟದಲ್ಲಿ ಪ್ರಧಾನ ಮಂತ್ರಿ ಕೇರ್ ನಿಧಿಗೆ ಬ್ಯಾಂಕ್ ಈಗಾಗಲೇ 100 ಕೋಟಿ ರೂಪಾಯಿಗಳ ದೇಣಿಗೆ ನೀಡಿದೆ.
ಕರ್ನಾಟಕ ರಾಜ್ಯದಲ್ಲಿನ ಕೋವಿಡ್ ಸಾಂಕ್ರಾಮಿತರ ನೆರವಿಗಾಗಿ ಹಮ್ಮಿಕೊಂಡಿರುವ ವಿವಿಧ ಪರಿಹಾರ ಕಾರ್ಯಗಳಿಗೆ ಭಾರತೀಯ ಸ್ಟೇಟ್ ಬ್ಯಾಂಕ್ 75.49 ಲಕ್ಷ ರೂ. ಸಹಾಯ ನೀಡುವ ಮೂಲಕ ರಾಜ್ಯ ಸರ್ಕಾರದೊಂದಿಗೆ ಕೈ ಜೋಡಿಸಿದೆ.
ಭಾರತೀಯ ಸ್ಟೇಟ್ ಬ್ಯಾಂಕ್ ವತಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಕೈಗೊಂಡಿರುವ ಕೆಲವು ಪರಿಹಾರ ಚಟಿವಟಿಕೆಗಳು :
1. 25 ದಿನಗಳವರೆಗೆ ಪ್ರತಿದಿನ 2500 ಆಹಾರ ಪೊಟ್ಟಣಗಳನ್ನು ಬೆಂಗಳೂರಿನ ವಸಂತಪುರ ಮತ್ತು ಸುತ್ತಮುತ್ತಲಿನ ನಿವಾಸಿಗಳಿಗೆ ವಿತರಣೆ.
2. ಮೈಸೂರ ಹಾಗೂ ತುಮಕೂರು ಜಿಲ್ಲೆಯ ಪೌರ ಕಾರ್ಮಿಕರಿಗೆ 5000 ಮುಖ ಗವಸು
3. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ “ವಂದೇ ಭಾರತ್ ಮಿಷನ್ ” ಕರ್ತವ್ಯದಲ್ಲಿ ನಿರತರಾಗಿರುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಗಳಿಗೆ 500 ಪಿಪಿ ಇ ಕಿಟ್ ಗಳನ್ನು ವಿತರಣೆ .
4. ಕರ್ನಾಟಕ ರಾಜ್ಯ ಡ್ರಗ್ಸ ಮತ್ತು ಲಾಜಿಸ್ಟಿಕ ವೆರ್ ಹೌಸಿಂಗ್ ಸೊಸೈಟಿ ಮೂಲಕ ರಾಜ್ಯ ಸರ್ಕಾರದ ಆರೋಗ್ಯ ಕಾರ್ಯ ಕರ್ತರಿಗೆ 1600 ಪಿಪಿಇ ಕಿಟ್ ನೀಡಲಾಗಿದೆ.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಸುಧೀರ್ ಚಂದ್ರ ಸೂಡ ಅವರು ಉಪಸ್ಥಿತರಿದ್ದರು.